ಚಿಕ್ಕೋಡಿ (ಬೆಳಗಾವಿ): ಸ್ಥಳೀಯ ಜನಪ್ರತಿನಿಧಿಯೊಬ್ಬರು ತಮ್ಮ ಹುಟ್ಟುಹಬ್ಬದಂದು ಇಬ್ಬರು ವಯೋವೃದ್ಧ ಮಹಿಳೆಯರ ಶಾಶ್ವತ ಆರೋಗ್ಯ ಖರ್ಚು ವಹಿಸಿಕೊಂಡು ಮಾನವೀಯತೆ ಮರೆದಿದ್ದಾರೆ.
ಹುಟ್ಟುಹಬ್ಬದಂದು ಇಬ್ಬರು ವೃದ್ಧೆಯರ ಶಾಶ್ವತ ಆರೋಗ್ಯದ ಖರ್ಚು ವಹಿಸಿಕೊಂಡ ಪುರಸಭೆ ಸದಸ್ಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ಸದಸ್ಯ ಸಂತೋಷ ನವಲೆ ಅವರು, ಸದಲಗಾ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ವೃದ್ಧರಾದ ತಾನಾಜಿ ಕಣಗಲೆ, ಸೇವಂತಾ ಮೇತ್ರೆ ಎನ್ನುವ ಇಬ್ಬರು ವಯೋವೃದ್ಧರ ಮಹಿಳೆಯ ಶಾಶ್ವತ ಆರೋಗ್ಯ ಖರ್ಚು ಭರಿಸಲು ಮುಂದಾಗಿದ್ದಾರೆ.
ಹಿರಿಯ ವಯಸ್ಸಿನ ಈ ಮಹಿಳೆರ ಪಾಲನೆಗೆ ಯಾರು ಇಲ್ಲದೇ ಇದ್ದುದ್ದನ್ನು ಕಂಡು ನರಳಾಡುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿಷಯ ಅರಿತ ಸ್ಥಳೀಯ ಪುರಸಭೆಯ ಸದಸ್ಯ ಸಂತೋಷ ನವಲೆಯವರು ಇಂತಹ ವೃದ್ಧರ ಆರೋಗ್ಯ ಸಮಸ್ಯೆ ಅರಿತು ಶಾಶ್ವತ ಆರೋಗ್ಯ ಖರ್ಚು ಭರಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ಗ್ರಾಮಸ್ಥರು ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ ಇಬ್ಬರು ಶಾಲಾ ಮಕ್ಕಳನ್ನು ದತ್ತು ಪಡೆದುಕೊಂಡು ಅವರ ಶಿಕ್ಷಣ ವೆಚ್ಚ ಭರಿಸಲು ಸಂತೋಷ ನವಲೆಯವರ ಮುಂದಾಗಿದ್ದು ಈಗಿನ ಯುವಕರಿಗೆ ಹಾಗೂ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.