ಬೆಳಗಾವಿ/ಅಥಣಿ: ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಹೊರಟ್ಟಿಯಲ್ಲಿ ಆರೂ ಮನೆಗಳಲ್ಲಿ ಕಳ್ಳರು ಕೈಚಳಕ ತೋರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಅಥಣಿ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳ ಕಳ್ಳತನ: ಕೈಚೆಲ್ಲಿ ಕುಳಿತ ಪೊಲೀಸರು - ಅಥಣಿ ಪೊಲೀಸ್ ಠಾಣೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸರಣಿಗಳ್ಳತನವಾಗಿದೆ. ದೇವಾಲಯ ಹಾಗೂ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ.
ಅಕ್ಬರ್ ಕರ್ಜಗಿ, ಗುರು ಜಮಖಂಡಿ, ಬಸೀರ್ ಅಪರಾಜ, ಹನುಮಂತ ಜಮಖಂಡಿ, ಗುರು ಮಾದರ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮುಲ್ಲಾ ಕುಟುಂಬದ ಮನೆಯಲ್ಲಿ 6 ಲಕ್ಷ ರೂಪಾಯಿ ಹಾಗೂ 10 ಗ್ರಾಂ ಚಿನ್ನ, ವಿಠಲ ಮಂದಿರದಲ್ಲಿ ಒಂದೂವರೆ ಕೆಜಿ ಬೆಳ್ಳಿ ಕಿರೀಟ ಮತ್ತು 10 ಗ್ರಾಂ ದೇವಿಯ ಮಾಂಗಲ್ಯ ಸರವನ್ನು ಕಳ್ಳರು ದೋಚಿದ್ದಾರೆ.
ದೇವಸ್ಥಾನಲ್ಲಿ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಕಳೆದ ಎರಡು ತಿಂಗಳಿನಿಂದ ಹಲವು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣ ದಾಖಲಾಗಿವೆ.