ಬೆಳಗಾವಿ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಇದೀಗ ಜನರನ್ನು ಉದ್ರೇಕಗೊಳಿಸುತ್ತಿದೆ. ಇದೊಂದು ಕಾಂಗ್ರೆಸ್ ಟೂಲ್ ಕಿಟ್ ಟೆರರಿಸಂನ ಒಂದು ಭಾಗ ಎಂದು ಬಿಜೆಪಿ ರಾಜ್ಯ ವಕ್ತಾರ, ಕುಡಚಿ ಶಾಸಕ ಪಿ. ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಿ.ರಾಜೀವ್, ಕಾಂಗ್ರೆಸ್ ಜನರ ಭಾವನೆ ಉದ್ರೇಕಗೊಳಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಜನರನ್ನು ಉದ್ರೇಕಗೊಳಿಸುತ್ತಿರುವ ಹಿನ್ನೆಲೆಯನ್ನು ನೋಡಿದರೆ ಕಾಂಗ್ರೆಸ್ ಟೂಲ್ ಕಿಟ್ ಟೆರರಿಸಂ ಮಾಡುತ್ತಿದೆ ಎನಿಸುತ್ತಿದೆ. ಟೂಲ್ ಕಿಟ್ ಅಂದ್ರೆ ಹಿಟ್ & ರನ್ ಸಂಸ್ಕೃತಿ ಕಾಂಗ್ರೆಸ್ನಲ್ಲಿದೆ. ಮುಗ್ಧ ಜನರಲ್ಲಿ, ಸಾಹಿತಿಗಳಲ್ಲಿ ಉದ್ರೇಕಗೊಳಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕುತ್ತಿದೆ. ಇದೊಂದು ಕಾಂಗ್ರೆಸ್ನ ಟೂಲ್ ಕಿಟ್ ಟೆರರಿಸಂ, ಇದಕ್ಕೆ ಸಾಹಿತಿಗಳು ಒಳಗಾಗಬಾರದು ಎಂದರು.