ಅಳಿಯನ ಜನ್ಮದಿನದಂದು 'ಶೌರ್ಯ'ನ ದತ್ತು ಪಡೆದ ಲಕ್ಷ್ಮೀ ಹೆಬ್ಬಾಳ್ಕರ್ - ಕಿತ್ತೂರು ರಾಣಿಚೆನ್ನಮ್ಮ ಮೃಗಾಲಯ
ಸಹೋದರ ಚೆನ್ನರಾಜ್ ಹಟ್ಟಿಹೊಳಿ ಅವರ ಮಗ ಹರ್ಷ ಜನ್ಮದಿನ ಹಿನ್ನೆಲೆ ಶೌರ್ಯ ಎಂಬ ಹೆಸರಿನ ಹುಲಿಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ದತ್ತು ತೆಗೆದುಕೊಂಡಿದ್ದಾರೆ.
ಅಳಿಯನ ಜನ್ಮದಿನದ ಹಿನ್ನೆಲೆ ಹುಲಿ ದತ್ತು ಪಡೆದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಅಳಿಯನ ಜನ್ಮದಿನದ ಪ್ರಯುಕ್ತ ಶೌರ್ಯ ಎಂಬ ಹೆಸರಿನ ಹುಲಿಯನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ದತ್ತು ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಕಿತ್ತೂರು ರಾಣಿಚೆನ್ನಮ್ಮ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ 1ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.
ಇದಲ್ಲದೇ ಬೆಳಗಾವಿಯಲ್ಲಿ ಕಿತ್ತೂರು ರಾಣಿಚೆನ್ನಮ್ಮ ಮೃಗಾಲಯ ಆಗಿರೋದು ನಮ್ಮ ಹೆಮ್ಮೆ. ಹೀಗಾಗಿ ಜಿಲ್ಲೆಯಲ್ಲಿರುವ ಶ್ರೀಮಂತರು, ದಾನಿಗಳು ಮುಂದೆಬಂದು ಪ್ರಾಣಿಗಳನ್ನು ಉಳಿಸಬೇಕಿದೆ. ಪ್ರಕೃತಿ, ಮೃಗಾಲಯ ಉಳಿಸುಕೊಳ್ಳುವುದು ನಮ್ಮ ಕರ್ತವ್ಯ. ಸಮಾಜಸೇವೆಯಲ್ಲಿ ತೊಡಗಿರುವ ಸಂಘಟನೆಗಳು ಮೃಗಾಲಯದಲ್ಲಿರುವ ಒಂದೊಂದು ಪ್ರಾಣಿಗಳನ್ನು ದತ್ತು ಪಡೆದುಕೊಳ್ಳಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.