ಅಥಣಿ (ಬೆಳಗಾವಿ) :ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಲವಾರು ಬಡ ಕುಟುಂಬಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ಉಚಿತ ಹಾಲು ವಿತರಣೆ ಮಾಡಿದರು. ಅಥಣಿ ಪಟ್ಟಣದಲ್ಲಿ ಇಂದು ಡಿಸಿಎಂ ಜೊತೆಯಾಗಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಅಪ್ಪಾ ಸಾಹೇಬ ಅವತಾಡೆ ಕೆಎಂಎಫ್ ವತಿಯಿಂದ ಹಾಲು ವಿತರಿಸಿದರು.
ಅಥಣಿ ಪಟ್ಟಣದಲ್ಲಿ ಉಚಿತವಾಗಿ ಹಾಲು ವಿತರಸಿದ ಡಿಸಿಎಂ ಲಕ್ಷ್ಮಣ ಸವದಿ.. - ಡಿಸಿಎಂ ಲಕ್ಷ್ಮಣ ಸವದಿ
ಅಥಣಿ ಪಟ್ಟಣದಲ್ಲಿ ಇಂದು ಡಿಸಿಎಂ ಜೊತೆಯಾಗಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಅಪ್ಪಾ ಸಾಹೇಬ ಅವತಾಡೆ ಕೆಎಂಎಫ್ ವತಿಯಿಂದ ಹಾಲು ವಿತರಿಸಿದರು.
milk
ಪ್ರತಿ ಮನೆ ಮನೆಗೂ ಹಾಲು ವಿತರಿಸಿದ ಬಳಿಕ ಡಿಸಿಎಂ ಸವದಿ ಮಾತನಾಡಿ, ಲಾಕ್‌ಡೌನ್ ಆದೇಶ ಪಾಲನೆ ಮಾಡಿ. ಮಾಸ್ಕ್ ಧರಿಸಿಕೊಳ್ಳಿ ಹಾಗೂ ಮೇಲಿಂದ ಮೇಲೆ ಕೈ ತೊಳೆಯಿರಿ, ವಿನಾಕಾರಣ ಹೊರಗೆ ಓಡಾಡಬೇಡಿ ಎಂದು ಸಲಹೆ ನೀಡಿದರು.