ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಸುನಿಲ್ ಸುನ್ನೋದೋಳ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ಡಿಸಿಎಂ ಲಕ್ಷ್ಮಣ್ ಸವದಿಯ ಕಾಲೆಳೆದಿದ್ದಾರೆ.
ಲಕ್ಷ್ಮಣ್ ಸವದಿಗೆ ಟಿಕೆಟ್ ತಪ್ಪಿದ್ದರಿಂದ ನೋವಾಗಿದೆ: ಮಾಜಿ ಸಚಿವ ಎಂ ಬಿ ಪಾಟೀಲ್ - ಡಿಸಿಎಂ ಲಕ್ಷಣ ಸವದಿ ಕಾಲೆಳೆದ ಎಂ ಬಿ ಪಾಟೀಲ್
ಬೇರೆ ಕಡೆಯಿಂದ ಬಂದವರಿಗೇ ಟಿಕೆಟ್ ದಕ್ಕಿದ್ದು, ಸ್ಥಳೀಯ ಬಿಜೆಪಿ ನಾಯಕರೇ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿಯವರಿಗೆ ಟಿಕೆಟ್ ಸಿಗದಿರುವ ಬಗ್ಗೆ ನೋವಾಗುತ್ತಿದೆ. ಅವರ ಬಗ್ಗೆ ನನಗೇ ಅನುಕಂಪ ಇದೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಲೇವಡಿ ಮಾಡಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಜಾಗದಲ್ಲಿ ನಾನಿದ್ದಿದ್ದರೆ ಬೇರೆಯೇ ಮಾಡುತ್ತಿದ್ದೆ: ಡಿಸಿಎಂ ಕಾಲೆಳೆದ ಪಾಟೀಲ್
ಸವದಿಯವರಿಗೆ ತಮ್ಮ ಪಕ್ಷದಿಂದಲೇ ಟಿಕೆಟ್ ಕೂಡ ಸಿಕ್ಕಿಲ್ಲ. ಅವರಿನ್ನೆಲ್ಲಿ ಕುಸ್ತಿ ಅಖಾಡಕ್ಕೆ ಇಳಿತಾರೆ ಎಂದು ಎಂ ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಬೇರೆ ಕಡೆಯಿಂದ ಬಂದವರಿಗೇ ಟಿಕೆಟ್ ದಕ್ಕಿದ್ದು, ಸ್ಥಳೀಯ ಬಿಜೆಪಿ ನಾಯಕರೇ ಆದ ಲಕ್ಷ್ಮಣ್ ಸವದಿಯವರಿಗೆ ಟಿಕೆಟ್ ಸಿಗದಿರುವುದು ನೋವು ತರಿಸಿದೆ. ಪಾಪ ಸವದಿಯವರಿಗೆ ಕುಸ್ತಿ ಅಡೋಕೆ ಪ್ರವೇಶವೂ ಸಿಗ್ಲಿಲ್ವಲ್ಲ ಎಮದು ಅನುಕಂಪ ವ್ಯಕ್ತಪಡಿಸಿದ್ದಾರೆ.