ಬೆಳಗಾವಿ/ಅಥಣಿ/ಚಿಕ್ಕೋಡಿ:ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಇಂದು ಬೆಳಗಾವಿ, ಅಥಣಿ ಮತ್ತು ಚಿಕ್ಕೋಡಿಯಲ್ಲಿ ಮಾಸ್ಕ್ ದಿನಾಚರಣೆ ಮಾಡಲಾಯಿತು.
ಬೆಳಗಾವಿಯ ಯುಥ್ ರೆಡ್‍ಕ್ರಾಸ್ ವಿಂಗ್, ಎಂ.ಎಂ.ಪಾಲಿಟೆಕ್ನಿಕ್ ಆಶ್ರಯದಲ್ಲಿ ಮಾಸ್ಕ್ ದಿನಾಚರಣೆ ಅಂಗವಾಗಿ ಬೆಳಗಾವಿಯ ಅಜಮ್ ನಗರದಿಂದ ಪಿ.ಕೆ.ಕ್ವಾಟರ್ಸ್‍ವರೆಗೆ ಕೊರೊನಾ ಸುರಕ್ಷತೆ ಹಾಗೂ ಮಾಸ್ಕ್ ಬಳಕೆ ಕುರಿತು ಯೂಥ್ ರೆಡ್ ಕ್ರಾಸ್ ವಿಂಗ್ ಕಾರ್ಯಕರ್ತರು, ಮುಖಂಡರು ಜಾಗೃತಿ ಮೂಡಿಸಿದರು.
ಯೂಥ್ ರೆಡ್ ಕ್ರಾಸ್ ವಿಂಗ್ನಿಂದ ಮಾಸ್ಕ್ ಡೇ ಆಚರಣೆ ಕೊರೊನಾಗೆ ಔಷಧಿ ಎಂದರೆ ಮಾಸ್ಕ್:
ಚಿಕ್ಕೋಡಿ ವರದಿ: ಬೆಳಗಾವಿಯ ನಿಪ್ಪಾಣಿ ಪಟ್ಟಣದಲ್ಲಿ ಮಾಸ್ಕ ದಿನಾಚರಣೆ ದಿನ ಆಚರಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಕೊರೊನಾ ಸೋಂಕಿಗೆ ಔಷಧಿ ಅಂದರೆ ಸಾಮಾಜಿಕ ಅಂತರ, ಮಾಸ್ಕ ಧರಿಸುವುದು ಮತ್ತು ಸ್ವಚ್ಚತೆಯನ್ನು ಕಾಪಾಡುವುದು ಮಾತ್ರ ಎಂದು ಸಲಹೆ ನೀಡಿದರು.
ಬಾಲ ಕಾರ್ಮಿಕರ ವಿರೋಧ ದಿನಾಚರಣೆಯನ್ನು ಮೊನ್ನೆ ಮಾಡಬೇಕಿತ್ತು. ಆದರೆ, ಅದನ್ನು ಇಂದೇ ಆಚರಿಸಿದ್ದೇವೆ. ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಥವಾ ಕರೆದುಕೊಳ್ಳುವುದು ದೊಡ್ಡ ಅಪರಾಧ. ಕೆಲಸಕ್ಕೆ ಕರೆದುಕೊಂಡರೆ ಅಂಥವರಿಗೆ ₹ 50 ಸಾವಿರ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ಇದೆ ಎಂದು ಎಚ್ಚರಿಸಿದರು.
ಎಸ್ಎಸ್ಎಲ್ಸಿ ಮಕ್ಕಳಿಗೆ ಮಾಸ್ಕ್
ಅಥಣಿ ವರದಿ: ಕಾಂಗ್ರೆಸ್ ಮುಖಂಡ ಹಾಗೂ ರೋಟರಿ ಕ್ಲಬ್ ಸಂಸ್ಥೆಯ ಅಧ್ಯಕ್ಷ ಗಜಾನನ ಮಂಗಸೂಳಿ ಅವರು, ಅಥಣಿ ಪಟ್ಟಣದ ಶಿಕ್ಷಣ ಇಲಾಖೆಯ ಕಚೇರಿಗೆ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮುರಟಗಿ ಅವರಿಗೆ 1500 ಮಾಸ್ಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಮಾಸ್ಕ್ ಡೇ. ಇದೇ ತಿಂಗಳು 25ರಂದು ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಿಕ್ಷಣಾಧಿಕಾರಿಗಳ ಮುಖಾಂತರ ಮಾಸ್ಕ್ ವಿತರಿಸಿ, ಮಾಸ್ಕ್ ಡೇ ಆಚರಿಸಿದ್ದೇವೆ ಎಂದರು.