ಬೆಳಗಾವಿ:ಎಂಇಎಸ್ ಆಯೋಜಿಸಿರುವ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶಾಸಕರು ಪಾಲ್ಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಬೆಳಗಾವಿಯಲ್ಲಿ ಹುತಾತ್ಮ ದಿನಾಚರಣೆ: ಪೊಲೀಸರು ಅಲರ್ಟ್!
ಎಂಇಎಸ್ ಆಯೋಜಿಸಿರುವ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಶಾಸಕರು ಪಾಲ್ಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಭಾಷಾ ಗಲಾಟೆಯಲ್ಲಿ ಮೃತಪಟ್ಟ ಎಂಇಎಸ್ ಕಾರ್ಯಕರ್ತರ ನೆನಪಿಗಾಗಿ ಬೆಳಗಾವಿಯ ಹುತಾತ್ಮ ಚೌಕ್ನಲ್ಲಿ ಹುತಾತ್ಮ ದಿನಾಚರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ನಾಲ್ಕೂ ದಿಕ್ಕಿನಲ್ಲಿ ಪೊಲೀಸ್ ಸರ್ಪಗಾವಲು ಇದೆ. ಮಹಾರಾಷ್ಟ್ರ ರಾಜ್ಯದ ವಾಹನಗಳನ್ನು ನಗರ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಎಂಇಎಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಾರಾಷ್ಟ್ರದ ಶಾಸಕರು ಆಗಮಿಸುವ ಸಾಧ್ಯತೆ ಇದೆ. ಹಿಂಡಲಗಾ, ಕಾಕತಿ ಸೇರಿದಂತೆ ಬೆಳಗಾವಿ ನಗರಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ್, ಶಾಸಕರಾದ ಏಕನಾಥ ಪಾಟೀಲ್, ರಾಜೇಶ್ ಪಾಟೀಲ್ ಆಗಮಿಸುವ ಸಾಧ್ಯತೆ ಇದೆ. ಶಿವಸೇನೆ, ಎನ್.ಸಿಪಿ ಹಾಗೂ ಎಂಇಎಸ್ನಿಂದ ಶಾಂತಿ ಕದಡುವ ಯತ್ನ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ವಾಹನದ ತಪಾಸಣೆ ನಡೆಸಲಾಗುತ್ತಿದೆ.