ಕರ್ನಾಟಕ

karnataka

ETV Bharat / state

ಸಾರಾಯಿ ತರಲು ಉಕ್ಕಿ ಹರಿಯೋ ನದಿ ದಾಟಲು ಮುಂದಾದ‌ ಭೂಪ: ಅಲ್ಲಿ ಆಗಿದ್ದೇನು?

ಸಾರಾಯಿ ತರಲೆಂದು ವ್ಯಕ್ತಿವೋರ್ವ ಉಕ್ಕಿ ಹರಿಯುತ್ತಿರುವ ನದಿ ದಾಟಲು ಮುಂದಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

man who jumped into the Ghataprabha river
ಈಜಿ ದಡ ಸೇರಿದ ಹಾಲಪ್ಪ

By

Published : Sep 27, 2020, 10:47 AM IST

ಬೆಳಗಾವಿ:ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಕುಡುಕನೋರ್ವ ಹುಚ್ಚಾಟ ಮೆರೆದಿರುವ ಘಟನೆ ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ.

ಸಾರಾಯಿ ತರಲೆಂದು ಮೂಡಲಗಿಯ ಢವಳೇಶ್ವರ ಗ್ರಾಮದಿಂದ‌ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಢವಳೇಶ್ವರ ಗ್ರಾಮಕ್ಕೆ ಈಜಿಕೊಂಡು ಹೋಗುವ ಸಲುವಾಗಿ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾಲಪ್ಪ ಎಂಬಾತ ಹಾರಿದ್ದಾನೆ.

ಈಜಿ ದಡ ಸೇರಿದ ಮದ್ಯ ವ್ಯಸನಿ

ನದಿ ತಟದಲ್ಲಿರುವ ಎರಡು ಗ್ರಾಮಗಳ ಹೆಸರು ಢವಳೇಶ್ವರ ಆಗಿದೆ. ಬೆಳಗಾವಿಯ ಢವಳೇಶ್ವರದಿಂದ ಬಾಗಲಕೋಟೆಯ ಢವಳೇಶ್ವರಕ್ಕೆ ಸಾರಾಯಿ ತರಲೆಂದು ಕುಡಿದ ಮತ್ತಿನಲ್ಲಿ‌ ಹಾರಿದ ಹಾಲಪ್ಪ, ಬಳಿಕ ಈಜಿ ದಡ ಸೇರಿದ್ದಾನೆ. ಕುಡುಕನ ಹುಚ್ಚಾಟ ಕಂಡು ಗ್ರಾಮಸ್ಥರು ಸುಸ್ತಾಗಿದ್ದಾರೆ. ಅದೃಷ್ಟವಶಾತ್ ಹಾಲಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ABOUT THE AUTHOR

...view details