ಕರ್ನಾಟಕ

karnataka

ETV Bharat / state

ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಬೆಳಗಾವಿಯ ಉಳಿದೆಡೆ ಲಾಕ್‌ಡೌನ್ ಸಡಿಲಿಕೆ: ಶೆಟ್ಟರ್​ - Lockdown loosening in Belgaum

ಬೆಳಗಾವಿ ಆರೆಂಜ್ ಝೋನ್‌ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಝೋನ್‌ಗೆ ಒಳಪಡುವ ನಿಯಮಗಳು ಮೇ 4ರಿಂದ ಜಾರಿಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Minister Jagdish Shetter
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್

By

Published : May 2, 2020, 8:26 PM IST

ಬೆಳಗಾವಿ:ಜಿಲ್ಲೆ ಆರೆಂಜ್ ಝೋನ್ ವ್ಯಾಪ್ತಿಗೆ ಒಳಪಟ್ಟಿದ್ದು, ಮೇ 4ರಿಂದ ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಲಾಕ್‌ಡೌನ್ ಸಡಿಲಿಕೆ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಆರೆಂಜ್ ಝೋನ್‌ಗೆ ಒಳಪಡುವ ನಿಯಮಗಳು ಮೇ 4ರಿಂದ ಜಾರಿಯಾಗಲಿವೆ. ಈಗಾಗಲೇ ಅನೇಕ ವಿಷಯಗಳ ಕುರಿತು ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚೆ ನಡೆಸಲಾಗಿದೆ. ಇದಲ್ಲದೇ ಕೈಗಾರಿಕೆಗಳ ಜೊತೆಗೂ ಚರ್ಚೆ ಮಾಡಿದ್ದು, ಕೇಂದ್ರದ ನಿರ್ದೇಶನಂತೆ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಕಂಟೈನಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಅಂಗಡಿಗಳು ಆರಂಭವಾಗಲಿದ್ದು, ವ್ಯಾಪಾರ ವಹಿವಾಟು, ಕೈಗಾರಿಕೋದ್ಯಮಕ್ಕೆ ಷರತ್ತುಬದ್ಧ ಅನುಮತಿ ಹಾಗೂ ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ. ಇದಕ್ಕೆ ಯಾವುದೇ ಪಾಸ್ ಅವಶ್ಯಕತೆ ಇಲ್ಲ. ಕೈಗಾರಿಕೋದ್ಯಮ ನಡೆಸುವವರು ಸೆಲ್ಫ್ ಡಿಕ್ಲೆರೇಷನ್ ಮಾಡಿ ಕೊಡಬೇಕು ಎಂದರು. ಮೇ 4ರಿಂದ ಕೇಂದ್ರ ಸರ್ಕಾರದ ಹೊಸ ನಿಯಮಗಳು ಜಾರಿಗೆ ಬರಲಿವೆ. ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಜನಸಾಮಾನ್ಯರು ಹೊರಗಡೆ ಓಡಾಡಬಾರದು. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 3 ತಾಲೂಕು ಬಿಟ್ಟು ಉಳಿದ ಕಡೆ ಸೋಂಕು ಹರಡಿಲ್ಲ. ನಿತ್ಯ ಚಟುವಟಿಕೆ ಎಂದಿನಂತೆ ನಡೆಯಬೇಕಿದೆ. ಹೀಗಾಗಿ ಕಟ್ಟಡ ಕಾಮಗಾರಿಗೆ ಸಹ ಅನುಮತಿ ನೀಡಲಾಗಿದೆ ಎಂದರು. ಇನ್ನು ಹಿರೇಬಾಗೇವಾಡಿ ಗ್ರಾಮದಲ್ಲಿ 16 ಸಾವಿರ ಜನಸಂಖ್ಯೆ ಇದ್ದು, ಇದುವರೆಗೂ 37 ಕೇಸ್ ದಾಖಲಾಗಿವೆ. 600ಕ್ಕೂ ಹೆಚ್ಚು ಜನರ ಗಂಟಲು ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಗ್ರಾಮಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.‌ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಮಾತ್ರ ಸೋಂಕು ಹರಡಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details