ಕರ್ನಾಟಕ

karnataka

ETV Bharat / state

ಅಥಣಿಯಲ್ಲಿ ಅಬಕಾರಿ ನಿಯಮ ಗಾಳಿಗೆ ತೂರಿ ಮದ್ಯ ಮಾರಾಟ; ಇಲಾಖೆಯಿಂದ ಕ್ರಮದ ಎಚ್ಚರಿಕೆ

ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡುವಾಗ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮದ್ಯದಂಗಡಿ ಮಾಲೀಕರು, ಗ್ರಾಹಕರಿಗೆ ಅಬಕಾರಿ ಇಲಾಖೆ ತಿಳಿಸಿತ್ತು.

Sale of liquor by violation of excise rules in Atani
ಮದ್ಯದಂಗಡಿಗಳಿಂದ ನಿಯಮ ಉಲ್ಲಂಘಣೆ

By

Published : May 11, 2020, 11:16 AM IST

ಅಥಣಿ : ಮಾರಾಟಗಾರರು ಮತ್ತು ಗ್ರಾಹಕರು ಮಾಸ್ಕ್​ ಧರಿಸಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲಾ ಮದ್ಯದಂಗಡಿ ಮಾಲೀಕರು ಮತ್ತು ಗ್ರಾಹಕರಿಗೆ ಅಬಕಾರಿ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ. ಆದರೆ, ತಾಲೂಕಿನ ಕೆಲ ಮದ್ಯದಂಗಡಿಗಳು ಈ ನಿಯಮಗಳನ್ನು ಪಾಲಿಸದೆ, ಬೇಕಾಬಿಟ್ಟಿ ಮದ್ಯ ವ್ಯಾಪಾರದಲ್ಲಿ ತೊಡಗಿವೆ.

ಈ ರೀತಿಯ ಬೇಜವಾಬ್ದಾರಿಯನ್ನು ಗಮನಿಸಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಭೀತಿ ಮುಗಿಯುವವರೆಗೆ ಮದ್ಯದಂಗಡಿಗಳನ್ನು ಬಂದ್​ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ, ತಾಲೂಕು ಅಬಕಾರಿ ಅಧಿಕಾರಿ ಮಹೇಶ್ ಧೂಳಪ್ಪ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ನಿಯಮ ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details