ಚಿಕ್ಕೋಡಿ: ರಾಜ್ಯದಲ್ಲಿರುವ ದೋಸ್ತಿ ಸರ್ಕಾರ ಗಂಡ ಬಿಟ್ಟ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.
'ಗಂಡ ಬಿಟ್ಟ ಹೆಂಡತಿ, ಹೆಂಡತಿ ಸತ್ತ ಗಂಡನ ಲವ್ ಮ್ಯಾರೇಜ್ನಂತಿದೆ ದೋಸ್ತಿ ಸರ್ಕಾರ' - undefined
ಸದ್ಯ ಒಬ್ಬರಿಗೊಬ್ಬರು ತಾಳ ತಂತಿ ಇಲ್ಲ, ಹೊಂದಾಣಿಕೆ ಇಲ್ಲ, ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಯೋಜನೆ ಇಲ್ಲ, ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಎಂದು ಹೇಳ್ತಾರೆ. ಆದರೆ, ಆ ಯೋಜನೆ ಕೇಂದ್ರ ಸರ್ಕಾರದ್ದು ಹಾಗಾದರೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸದ್ಯ ಒಬ್ಬರಿಗೊಬ್ಬರು ತಾಳ ತಂತಿ ಇಲ್ಲ, ಹೊಂದಾಣಿಕೆ ಇಲ್ಲ, ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಯೋಜನೆ ಇಲ್ಲ. ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಎಂದು ಹೇಳ್ತಾರೆ. ಆದರೆ, ಆ ಯೋಜನೆ ಕೇಂದ್ರ ಸರ್ಕಾರದ್ದು ಹಾಗಾದರೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರಿಗೂ ಹಾಗೂ ದೇವೇಗೌಡರಿಗೂ 20 ವರ್ಷಗಳ ರಾಜಕೀಯ ದ್ವೇಷವಿದೆ. 2004 ರಲ್ಲಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ದೇವೇಗೌಡರು ಅದಕ್ಕೆ ಅಡ್ಡಗಾಲು ಹಾಕಿ ಆ ಅವಕಾಶ ಕಸಿದಿದ್ದು ಸಿದ್ದು ಮನಸಿನಲ್ಲಿದೆ.ಆ ಒಂದು ಆಕ್ರೋಶದಿಂದಲೇ ಸಿದ್ದರಾಮಯ್ಯ ಅವರು ಗೌಡರ ವಿರುದ್ಧ ಸೇಡು ತೀರಿಸಿಕೊಂಡರು. ಸಿದ್ದರಾಮಯ್ಯನವರ ರಾಜಕೀಯ ಒಳ ಸುಳಿವು ನೋಡಿದಾಗ ಇದೆಲ್ಲ ಗೊತ್ತಾಗುತ್ತೆ ಎಂದ ಲಕ್ಷ್ಮಣ ಸವದಿ ವ್ಯಂಗವಾಡಿದಾರೆ.