ಅಥಣಿ (ಬೆಳಗಾವಿ):ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಅಥಣಿ ತಾಲೂಕಿನ ಝುಂಜರವಾಡ ಹಾಗೂ ಜಮಖಂಡಿ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿವೆ.
ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ..ಝುಂಜರವಾಡ, ಜಮಖಂಡಿ ರಸ್ತೆ ಸಂಪರ್ಕ ಕಡಿತ - ಅಥಣಿ ಸುದ್ದಿ
ಕೃಷ್ಣಾ ನದಿಯ ಹಿನ್ನೀರಿನಿಂದ ಅಥಣಿ ತಾಲೂಕಿನ ಝುಂಜರವಾಡ ಹಾಗೂ ಜಮಖಂಡಿ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿವೆ.
ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ..ಝುಂಜರವಾಡ, ಜಮಖಂಡಿ ರಸ್ತೆ ಸಂಪರ್ಕ ಕಡಿತ
ಕೃಷ್ಣಾ ನದಿಯ ಹಿನ್ನೀರಿನಿಂದ ಝುಂಜರವಾಡ ಮತ್ತು ತುಬಚಿ ರಸ್ತೆಗಳು ಜಲಾವೃತವಾಗಿದ್ದು, ಝುಂಜರವಾಡ ಹಾಗೂ ಜಮಖಂಡಿ ತಾಲೂಕುಗಳ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಒಂದು ಕಿಲೋ ಮೀಟರ್ ದೂರವನ್ನು ಹತ್ತು ಕಿಲೋಮೀಟರ್ ಸುತ್ತಿಕೊಂಡು ಬರುವಂತಾಗಿದೆ.
ಅಥಣಿ, ಝುಂಜರವಾಡ ಮಾರ್ಗವಾಗಿ ಹಾಗೂ ಬಾಗಲಕೋಟೆ, ಜಮಖಂಡಿ ಸಂಪರ್ಕ ಕಲ್ಪಿಸುವ 15 ಕಿಲೋಮೀಟರ್ ಪ್ರಯಾಣ ಇದೀಗ ಸಾವಳಗಿ ಮಾರ್ಗವಾಗಿ 40 ಕಿಲೋಮೀಟರ್ ಆಗಿದೆ.