ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧ್ಗಂಗಾ ನದಿಗಳ ಒಳಹರಿವಿನಲ್ಲಿ ಏರಿಕೆಯಾಗಿದೆ. 65,000ಕ್ಕೂ ಅಧಿಕ ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಕೃಷ್ಣಾ ನದಿ ಒಳಹರಿವು ಇದೆ ಎಂದು ತಹಶೀಲ್ದಾರ್ ಶುಭಾಸ ಸಂಪಗಾಂವಿ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕೃಷ್ಣಾ ನದಿಯ ಒಳಹರಿವು ಹೆಚ್ಚಳ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 53,500 ಕ್ಯೂಸೆಕ್ ನೀರು, ದೂಧ್ಗಂಗಾ ನದಿಯಿಂದ 11,616 ಕ್ಯೂಸೆಕ್ ನೀರು ಹೀಗೆ ಒಟ್ಟು 65,000 ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 64 ಮಿ.ಮೀ., ನವಜಾ - 67 ಮಿ.ಮೀ., ಮಹಾಬಲೇಶ್ವರ - 126 ಮಿ.ಮೀ., ವಾರಣಾ - 45 ಮಿ.ಮೀ., ಸಾಂಗಲಿ - 136 ಮಿ.ಮೀ., ಕೊಲ್ಲಾಪೂರ - 130 ಮಿ.ಮೀ., ಕಾಳಮ್ಮವಾಡಿ - 36 ಮಿ.ಮೀ., ರಾಧಾನಗರಿ - 70 ಮಿ.ಮೀ., ಪಾಟಗಾಂವ - 67 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.
ಚಿಕ್ಕೋಡಿ - 86.4 ಮಿ.ಮೀ., ಅಂಕಲಿ - 68.8 ಮಿ.ಮೀ., ನಾಗರಮುನ್ನೊಳಿ - 48.6 ಮಿ.ಮೀ., ಸದಲಗಾ - 95 ಮಿ.ಮೀ., ಜೋಡಟ್ಟಿ - 50.5 ಮಿ.ಮೀ. ಮಳೆಯಾಗಿದೆ. ಸದ್ಯ ಕೊಯ್ನಾ ಜಲಾಶಯ 99.39%, ವಾರಣಾ ಜಲಾಶಯ 100%, ರಾಧಾನಗರಿ ಜಲಾಶಯ 98.89%, ಕಣೇರ ಜಲಾಶಯ 100%, ಧೂಮ ಜಲಾಶಯ 99.85%, ಪಾಟಗಾಂವ 100%, ಧೂದ್ಗಂಗಾ 100%ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 68,000 ಹಾಗೂ ಆಲಮಟ್ಟಿ ಜಲಾಶಯದಿಂದ 1,17,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.
ರಸ್ತೆಗೆ ನುಗ್ಗಿದ ನೀರು- ಜನಜೀವನ ಅಸ್ತವ್ಯಸ್ತ:ಚಿಕ್ಕೋಡಿ ಉಪ ವಿಭಾಗದ ಶಿನಾಳ-ಕಾತ್ರಾಳ, ಕೌಲಗುಡ್ಡ-ಮೋಳೆ, ಕೆಂಪವಾಡ - ಮಿರಜ, ಶಿರೂರ -ಖೇಳೆಗಾಂವ, ಕಾತ್ರಾಳ - ತಂಗಡಿ, ಸಂಬರಗಿ-ಆಜೂರ ಬಿಜ್ಜರಗಿ - ತೇಲಸಂಗ, ಕೆಂಪವಾಡ - ಖಟಾವ ರಸ್ತೆಗೆ ನುಗ್ಗಿದ ನೀರಿನಿಂದ ಜನರಿಗೆ ತೊಂದರೆ ಉಂಟಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ರಕ್ಕಸ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.