ಬೆಳಗಾವಿ:ಇಲ್ಲಿನ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ನಾಯಿ ಮಲ ವಿಸರ್ಜನೆ ಮಾಡಿದ್ದರೂ ನಿನ್ನೆ ರಾತ್ರಿಯಿಂದ ಬೀಮ್ಸ್ನ ಯಾವುದೇ ಸಿಬ್ಬಂದಿ ಸ್ವಚ್ಛ ಮಾಡಿಲ್ಲ. ಈ ಕಡೆ ಯಾರೊಬ್ಬರೂ ಬಂದೇ ಇಲ್ಲ ಎಂದು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.
ಬೆಳಗಾವಿಯ ಕೋವಿಡ್ ವಾರ್ಡ್‌ನಲ್ಲಿ ನಾಯಿ ಮಲ ವಿಸರ್ಜನೆ ಮಾಡಿದ್ರೂ ಸ್ವಚ್ಛ ಮಾಡೋರಿಲ್ವಂತೆ!
ಬೆಳಗಾವಿ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ನಾಯಿ ಮಲ ವಿಸರ್ಜನೆ ಮಾಡಿದ್ದರೂ ನಿನ್ನೆ ರಾತ್ರಿಯಿಂದ ಬೀಮ್ಸ್ ನ ಯಾವುದೇ ಸಿಬ್ಬಂದಿ ಸ್ವಚ್ಛ ಮಾಡಿಲ್ಲ. ಈ ಕಡೆ ಯಾರೊಬ್ಬರೂ ಬಂದೇ ಇಲ್ಲ ಎಂದು ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.
ಬೀಮ್ಸ್ ಕಾರ್ಯವೈಖರಿಗೆ ಅಸಮಾಧಾನಗೊಂಡಿರುವ ಸೋಂಕಿತರು ಇಲ್ಲಿನ ನರಕ ಯಾತನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 30ಕ್ಕೂ ಹೆಚ್ಚು ಸೋಂಕಿತರಿಗೆ ಇಲ್ಲಿರುವುದು ಒಂದೇ ಶೌಚಾಲಯ. ಶೌಚಾಲಯದಲ್ಲಿ ಸರಿಯಾಗಿ ನೀರೂ ಸಹ ಇಲ್ಲ. ಸ್ವಚ್ಛತೆಯಂತೂ ಇಲ್ವೇ ಇಲ್ಲ. ವಾರ್ಡಿನ ಕಿಟಕಿಗಳಿಗೆ ಬಾಗಿಲಿಲ್ಲದೇ ಮಳೆ ನೀರು ಒಳಗೆ ಬರುತ್ತಿದೆ. ಕಿಟಕಿಗಳಿಗೆ ಪ್ಲಾಸ್ಟಿಕ್ ಕಟ್ಟಿ ಮಳೆ ನೀರು ಒಳಗೆ ಬರದಂತೆ ಸೋಂಕಿತರೇ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ.
ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ಅವ್ಯವಸ್ಥೆಯ ಆಗರವಾಗಿದ್ದು, ಸೋಂಕಿತರಷ್ಟೇ ಅಲ್ಲ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.