ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗಾಂಜಾ ಸಾಗಾಟ.. ಆರೋಪಿ ಅಂದರ್​​ - belgavi marijuana case

ಅಬಕಾರಿ ನಿರೀಕ್ಷಕ ರವೀಂದ್ರ ಹೊಸಳ್ಳಿ ಅವರ ನೇತೃತ್ವದ ಅಬಕಾರಿ ಸಿಬ್ಬಂದಿ ದಾಳಿ ನಡೆಸಿದ್ದು, ಈ ಕುರಿತು ಬೆಳಗಾವಿ ದಕ್ಷಿಣ ಜಿಲ್ಲೆ ಅಬಕಾರಿ ಉಪ ಆಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ..

illegal marijuana business ; accused arrested !
ಅಕ್ರಮವಾಗಿ ಗಾಂಜಾ ಸಾಗಾಟ....ಆರೋಪಿ ಅಂದರ್​​

By

Published : Dec 12, 2020, 6:48 AM IST

ಬೆಳಗಾವಿ :ಅಕ್ರಮವಾಗಿ 2 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯೋರ್ವನ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ತನಿಖೆಗೊಪ್ಪಿಸಿದ್ದಾರೆ.

ಒಡಿಶಾ ರಾಜ್ಯದ ಕಂದಮಾಲ ಜಿಲ್ಲೆಯ ತಿಲಬಂಗಿಯ ಅನುಕೂಲಚಂದ್ರ ಮಹೇಂದ್ರ ಕನ್ಹಾರ್ (22) ಬಂಧಿತ ವ್ಯಕ್ತಿ. ಈತ ಬೆಳಗಾವಿಯ ಮಹಾಂತೇಶ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ 2 ಕೆಜಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ‌ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

ಆತನಿಂದ ಒಣಗಿದ ಗಾಂಜಾ ವಶಪಡಿಸಿಕೊಂಡು ಬಳಿಕ ಆತನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:10 ವರ್ಷಗಳಿಂದ ಮದುವೆ ಹಾಲ್​​​ಗಳಲ್ಲಿ ಕಳ್ಳತನ ; ಆರೋಪಿ ಅಂದರ್​!

ಅಬಕಾರಿ ನಿರೀಕ್ಷಕ ರವೀಂದ್ರ ಹೊಸಳ್ಳಿ ಅವರ ನೇತೃತ್ವದ ಅಬಕಾರಿ ಸಿಬ್ಬಂದಿ ದಾಳಿ ನಡೆಸಿದ್ದು, ಈ ಕುರಿತು ಬೆಳಗಾವಿ ದಕ್ಷಿಣ ಜಿಲ್ಲೆ ಅಬಕಾರಿ ಉಪ ಆಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details