ಬೆಳಗಾವಿ:ಗೋವಾದಿಂದ ಮಹಾರಾಷ್ಟ್ರಕ್ಕೆ ವಾಹನವೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ವಿವಿಧ ಬ್ರ್ಯಾಂಡ್‌ನ 75 ಮದ್ಯದ ಬಾಕ್ಸ್ಗಳನ್ನು ಬೆಳಗಾವಿಯ ಅಬಕಾರಿ ಪೊಲೀಸರು ನಗರದ ಚೆನ್ನಮ್ಮ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ.
ಅನಧಿಕೃತವಾಗಿ ಸಾಗಿಸುತ್ತಿದ್ದ 75 ಮದ್ಯದ ಬಾಕ್ಸ್ ವಶ: ಇಬ್ಬರ ಬಂಧನ - ಮದ್ಯ
ಮಹಾರಾಷ್ಟ್ರ ನೋಂದಣಿಯ ವಾಹನದಲ್ಲಿ ಗೋವಾ ಲಿಕ್ಕರ್ಅನ್ನು ಅನಧಿಕೃತವಾಗಿ ಸಾಗಿಸಲಾಗುತ್ತಿತ್ತು. ಕಾರ್ಯಾಚರಣೆ ನಡೆಸಿ ಮದ್ಯ ವಶಪಡಿಸಿಕೊಂಡು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
75 ಮದ್ಯದ ಬಾಕ್ಸ್ ವಶ
ಪ್ರಕರಣದಡಿ ಮಹಾರಾಷ್ಟ್ರದ ಒಸ್ಮಾನಾಬಾದ್ ಮೂಲದ ಬಸಪ್ಪ ಕೋಳಿ ಹಾಗೂ ರಮೇಶ್ ಕಾಂಬಳೆ ಎಂಬುವವರನ್ನುಬಂಧಿಸಲಾಗಿದೆ. ಮಹಾರಾಷ್ಟ್ರ ನೋಂದಣಿಯ ವಾಹನದಲ್ಲಿ ಗೋವಾ ಲಿಕ್ಕರ್ಅನ್ನು ಅನಧಿಕೃತವಾಗಿ ಸಾಗಿಸಲಾಗುತ್ತಿತ್ತು.
ಅಬಕಾರಿ ಇಲಾಖೆ ಜಂಟಿ ಆಯುಕ್ತ ಮಂಜುನಾಥ್ ಮಾರ್ಗದರ್ಶನದಲ್ಲಿ ಅಬಕಾರಿ ಡಿಸಿ ಅರುಣ್‌ಕುಮಾರ್, ಡಿವೈಎಸ್ಪಿ ವಿಜಯಕುಮಾರ್ ಹಿರೇಮಠ, ಇನ್ಸ್‌ಪೆಕ್ಟರ್ ರವಿ ಹೊಸಳ್ಳಿ ನೇತೃತ್ವದ ತಂಡ ದಾಳಿ ನಡೆಸಿದೆ.