ಕರ್ನಾಟಕ

karnataka

ETV Bharat / state

ಸಾರ್ವಜನಿಕರು ಅನಗತ್ಯವಾಗಿ ಹೊರಬಂದರೆ ಕಠಿಣ ಕ್ರಮ

ಲಾಕ್‌ಡೌನ್ ಉಲ್ಲಂಘಿಸಿದವರ ಮೇಲೆ ನಿಪ್ಪಾಣಿ ಶಹರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 11 ಕೇಸು ದಾಖಲಿಸಿಕೊಂಡು 33 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಹಾಗೂ 35 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾರ್ವಜನಿಕರು ಅನಗತ್ಯವಾಗಿ ಹೊರಬಂದರೆ ಕಠಿಣ ಕ್ರಮ ...
ಸಾರ್ವಜನಿಕರು ಅನಗತ್ಯವಾಗಿ ಹೊರಬಂದರೆ ಕಠಿಣ ಕ್ರಮ ...

By

Published : Apr 20, 2020, 4:24 PM IST

Updated : Apr 20, 2020, 10:52 PM IST

ಚಿಕ್ಕೋಡಿ: ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದಂತೆ ಪೊಲೀಸ್ ಇಲಾಖೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಾ ಬಂದಿದೆ. ಆದ್ರೆ, ಸಾರ್ವಜನಿಕರು ನಿರ್ಲಕ್ಷ್ಯ ತೋರಿ ವಿನಾಃಕಾರಣ ರಸ್ತೆಗಿಳಿದು ಓಡಾಡುತಿದ್ದು, ಅಂತವರ ಮೇಲೆ‌ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಿಪ್ಪಾಣಿ ಶಹರ ಠಾಣೆಯ ಉಪನಿರೀಕ್ಷಕ ಕುಮಾರ ಹಡಕರ್ ಹೇಳಿದರು.

ಈಗಾಗಲೇ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ಜನರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದವರ ಮೇಲೆ ನಿಪ್ಪಾಣಿ ಶಹರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 11 ಕೇಸು ದಾಖಲಿಸಿಕೊಂಡು 33 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಹಾಗೂ 35 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ನಿಪ್ಪಾಣಿ ಪಟ್ಟಣ ಅಷ್ಟೇ ಅಲ್ಲದೆ ಪೊಲೀಸ್​ ಇಲಾಖೆಯಿಂದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ತಾಲೂಕಿನ ಗ್ರಾಮಗಳಲ್ಲಿ ಜನರು ಪೊಲೀಸ್​ ವಾಹನ ಕಂಡು ಮರೆಯಾಗುವುದು, ಅಡಗಿ ಕೊಳ್ಳುವುದು ಮಾಡುತ್ತಿದ್ದಾರೆ. ಮತ್ತೆ ಪೊಲೀಸ್​ ವಾಹನ ಹೋದ ಮೇಲೆ ಯಥಾಸ್ಥಿತಿಯಲ್ಲಿ ಜನರು ಓಡಾಡುತಿದ್ದಾರೆ. ಇಂತವರು ಒಂದು ವೇಳೆ ಸಿಕ್ಕಿಕೊಂಡರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Last Updated : Apr 20, 2020, 10:52 PM IST

ABOUT THE AUTHOR

...view details