ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲೀಗ ತಲ್ವಾರ್ನದ್ದೇ ಸದ್ದು, ಕೈಯಲ್ಲಿ ತಲ್ವಾರ್ ಹಿಡಿದು ಹಬ್ಬ ಆಚರಿಸುವ ಸಂಸ್ಕೃತಿ ಆರಂಭವಾಗಿದೆ. ಕೆಲದಿನಗಳ ಹಿಂದೆಯಷ್ಟೇ ನಡೆದ ನವರಾತ್ರಿ ಉತ್ಸವದ ಮೆರವಣಿಗೆ ವೇಳೆ ಹಿಂದೂಪರ ಸಂಘಟನೆ ಕಾರ್ಯಕರ್ತರು ತಲ್ವಾರ್ ಹಿಡಿದು ಮೆರವಣಿಗೆ ಮಾಡಿದ್ದರು.
ಈದ್ ಮಿಲಾದ್ ಮೆರವಣಿಗೆ ವೇಳೆ ತಲ್ವಾರ ಪ್ರದರ್ಶನ: ವಿಡಿಯೋ ವೈರಲ್ - ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ತಲ್ವಾರ ಪ್ರದರ್ಶನ ವಿಡಿಯೋ ವೈರಲ್
ನಿನ್ನೆ ನಡೆದ ಈದ್ ಮಿಲಾದ್ ಹಬ್ಬದ ವೇಳೆಯೂ ತಲ್ವಾರ್ ಪ್ರದರ್ಶಿಸಿರುವ ಯುವಕರು, ತಲ್ವಾರ್ ಹಿಡಿದು ನೃತ್ಯ ಮಾಡಿದ್ದಾರೆ.
ಈದ್ ಮಿಲಾದ್ ಮೆರವಣಿಗೆ ವೇಳೆ ತಲ್ವಾರ ಪ್ರದರ್ಶನ
ನಿನ್ನೆ ನಡೆದ ಈದ್ ಮಿಲಾದ್ ಹಬ್ಬದ ವೇಳೆಯೂ ಇಂತಹುದೇ ಘಟನೆ ಮರುಕಳಿಸಿದೆ. ತಲ್ವಾರ್ ಪ್ರದರ್ಶಿಸಿರುವ ಯುವಕರು, ತಲ್ವಾರ್ ಹಿಡಿದು ನೃತ್ಯ ಮಾಡಿದ್ದಾರೆ. ಬೆಳಗಾವಿ ಗಾಂಧಿ ನಗರದಲ್ಲಿ ನಿನ್ನೆ ಸಂಜೆ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ತಲ್ವಾರ್ ಹಿಡಿದು ಸಂಭ್ರಮಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು: ವಿಡಿಯೋ ವೈರಲ್
Last Updated : Oct 20, 2021, 8:12 PM IST