ಕರ್ನಾಟಕ

karnataka

ETV Bharat / state

ಅವಶ್ಯವಿದ್ದಲ್ಲಿ ಪರಿಹಾರ ಕೇಂದ್ರ ಮುಂದುವರಿಸಲಾಗುವುದು: ಡಿಸಿ ಭರವಸೆ - ಪರಿಹಾರ ಕೇಂದ್ರ

ನೆರೆ ಹಾನಿಯಿಂದ ಮನೆ ಕಳೆದುಕೊಂಡು ಇಂದಿಗೂ ಯಾರು ಜಾಗವಿಲ್ಲದೇ ಪರಾದಾಡುತ್ತಿದ್ದಾರೋ, ಅವರಿಗಾಗಿ ಈಗಲೂ ಪರಿಹಾರ ಕೇಂದ್ರ ಮುಂದುವರೆಸಿ ಆಶ್ರಯ ನೀಡುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಎಸ್.ಬಿ ಬೊಮ್ಮನಹಳ್ಳಿ

By

Published : Sep 17, 2019, 10:37 AM IST

ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶದ ನಿರಾಶ್ರಿತರಲ್ಲಿ ಯಾರು ಮನೆ ಕಳೆದುಕೊಂಡು ಇರಲು ಜಾಗ ಇಲ್ಲದೇ ಪರದಾಡುವಂತವರಿಗಾಗಿ, ಅವಶ್ಯ ಇದ್ದಲ್ಲಿ ಪರಿಹಾರ ಕೇಂದ್ರವನ್ನು ಸರ್ಕಾರದ ವತಿಯಿಂದ ತೆರೆಯಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ, ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಸರ್ಕಾರ ಕೆಲಸ ಮಾಡುತ್ತದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕೇಂದ್ರದ ಅವಶ್ಯಕತೆ ಇದ್ದರೆ ಈಗಲೂ ಸರ್ಕಾರ ಮುಂದುವರೆಸುತ್ತದೆ. ಅಥಣಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಮುಖ್ಯಮಂತ್ರಿಗಳ ಘೋಷಣೆ ಮಾಡಿದ ಹಾಗೆ, ಮನೆಯಲ್ಲಿ ನೀರು ಹೊಕ್ಕ ಕುಟುಂಬಕ್ಕೆ ಹತ್ತು ಸಾವಿರ ಪರಿಹಾರ ನೀಡಲಾಗುವುದು ಎಂದರು‌.

ಅವಶ್ಯವಿದ್ದಲ್ಲಿ ಪರಿಹಾರ ಕೇಂದ್ರ ಮುಂದುವರೆಸಲಾಗುವುದು

ರೈತರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡುತ್ತಿದ್ದು. ಯಾವುದೇ ಸಮಸ್ಯೆ ಇದ್ದಲ್ಲಿ ನಮಗೆ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ನೀಡುವ ಭರವಸೆ ನೀಡಲಾಗಿದ್ದು, ಯಾರೂ ಕೂಡ ಪ್ರತಿಭಟನೆ ಮಾಡದೇ ಸಹಕಾರ ಮಾಡಬೇಕು ಎಂದು ಹೇಳಿದರು.

ABOUT THE AUTHOR

...view details