ಕರ್ನಾಟಕ

karnataka

ETV Bharat / state

ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ: ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಸ್ಪಷ್ಟನೆ

ಕುಮಾರಣ್ಣನಿಗೆ ಯಾವುದೇ ಕಾರಣಕ್ಕೂ ನಾನು ಬರುವುದಿಲ್ಲ. ನಮ್ಮ ಇಬ್ಬರ ಉದ್ದೇಶ ಒಂದೇ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ನಾನು ಬಿಜೆಪಿಯಲ್ಲಿ ಮಾಡ್ತೀನಿ ನೀನು ಜೆಡಿಎಸ್​​ನಲ್ಲಿ ಮಾಡು ಅಷ್ಟೆ ಅಂತಾ ಹೇಳಿದ್ದೇನೆ‌ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ‌ ತಿಳಿಸಿದ್ದಾರೆ.

Former Minister Ramesh Jarakiholi
ಮಾಜಿ ಸಚಿವ ರಮೇಶ ಜಾರಕಿಹೊಳಿ‌

By

Published : Nov 19, 2022, 3:37 PM IST

Updated : Nov 19, 2022, 5:21 PM IST

ಬೆಳಗಾವಿ:ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲೇಬೇಕು ಎಂಬ ಗುರಿ ಇದೆ. ಹೀಗಾಗಿ ರಮೇಶ್ ಜಾರಕಿಹೊಳಿ ಮತ್ತು ಹೆಚ್‌ಡಿಕೆ ಅವರದು ಉದ್ದೇಶ ಒಂದೇ. ಇಬ್ಬರಿಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮತ್ತೊಮ್ಮೆ ಹೇಳುತ್ತೇನೆ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ‌. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬಹುಮತ ಬರುವಂತೆ ಮಾಡಿ ಸರ್ಕಾರ ರಚಿಸಲೇಬೇಕು. ಹೆಚ್ ಡಿ‌‌ ಕುಮಾರಸ್ವಾಮಿಗೆ ನಾನು ಈಗಾಗಲೇ ಹೇಳಿದ್ದೇನೆ, ಕುಮಾರಣ್ಣ ಯಾವುದೇ ಕಾರಣಕ್ಕೂ ನಾನು ಬರುವುದಿಲ್ಲ. ನಿನ್ನ ಉದ್ದೇಶ ನೀನು ಮಾಡು, ನನ್ನ ಉದ್ದೇಶ ನಾನು ಮಾಡುತ್ತೇನೆ. ನಮ್ಮ ಇಬ್ಬರ ಉದ್ದೇಶ ಒಂದೇ, ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು. ನಾನು ಬಿಜೆಪಿಯಲ್ಲಿ ಮಾಡ್ತೀನಿ ನೀನು ಜೆಡಿಎಸ್​​ನಲ್ಲಿ ಮಾಡು ಅಷ್ಟೆ ಅಂತಾ ಹೇಳಿದ್ದೇನೆ‌ ಎಂದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ‌

ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಒಂದು ವರ್ಷದಿಂದ ನಾನು ಹೇಳುತ್ತಾ ಬಂದಿದ್ದೇನೆ. ಈವರೆಗೂ ಒಬ್ಬರ ಮನೆಗೂ ನಾನು ಮಂತ್ರಿ ಮಾಡು ಅಂತಾ ಹೋಗಿಲ್ಲ. ನಾನು ಹೇಳಿದರೂ ಸತತವಾಗಿ ರಮೇಶ ಜಾರಕಿಹೊಳಿ ದೆಹಲಿಗೆ ಹೋಗಿ ಲಾಭಿ ಮಾಡುತ್ತಿದ್ದಾರೆ ಎಂದು ಬರುತ್ತಿದೆ.

ನಾನು ಲಾಭಿ ಮಾಡುವ ಮನುಷ್ಯನಲ್ಲ. ಸರ್ಕಾರ ಮಾಡಿದವರು ನಾನಲ್ಲ ನಾವು. ನಾನು ಬಯೋಡೇಟಾ ತಗೆದುಕೊಂಡು ಹೋಗಿ ಮಂತ್ರಿ ಮಾಡಿ ಅಂತಾ ಕೇಳುವ ಕೆಳಮಟ್ಟಕ್ಕೆ ಇಳಿದಿಲ್ಲ. ಹೈಕಮಾಂಡ್‌ ಯಾವಾಗ ಮಂತ್ರಿ ಮಾಡ್ತಾರೆ ಮಾಡಲಿ. ಬೇಡ ಅಂದ್ರೆ ಬಿಡಲಿ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:ಕಳಂಕ ನಿವಾರಣೆಗಾದರೂ ಮಂತ್ರಿ ಭಾಗ್ಯ ನೀಡಿ: ಬಿಜೆಪಿ ವರಿಷ್ಠರಿಗೆ ಮಾಜಿ ಸಚಿವರಿಬ್ಬರಿಂದ ಒತ್ತಡ

Last Updated : Nov 19, 2022, 5:21 PM IST

ABOUT THE AUTHOR

...view details