ಕರ್ನಾಟಕ

karnataka

ETV Bharat / state

ಸಹೋದರರ ಜೊತೆಗೂಡಿ ಪತ್ನಿಯನ್ನೇ ಹತ್ಯೆಗೈದ ಪತಿ - ಬೆಳಗಾವಿಯಲ್ಲಿ ಪತ್ನಿ ಕೊಂದ ಪತಿ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಪಾಪಿ ಪತಿ ತನ್ನ ಸಹೋದರರ ಜೊತೆಗೂಡಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Husband murdered his wife with brothers at Belgaum
ಸಹೋದರರ ಜೊತೆಗೂಡಿ ಪತ್ನಿಯನ್ನೇ ಹತ್ಯೆಗೈದ ಪತಿ

By

Published : Aug 11, 2021, 10:55 PM IST

ಬೆಳಗಾವಿ:ತನ್ನ ಸಹೋದರರ ಜೊತೆಗೂಡಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.

ಬೀಡಿ ಗ್ರಾಮದ ರೇಷ್ಮಾ ರಹಿಮಾನ್ ತಾಸೆವಾಲೆ ಮೃತ ಮಹಿಳೆ. ಆಸ್ತಿ ಹಂಚಿಕೆ ವಿಚಾರವಾಗಿ ಮಹಿಳೆ ಹಾಗೂ ಪತಿಯ ಸಹೋದರರ ಮಧ್ಯೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಗಲಾಟೆ ನಡೆದಿದೆ. ಆಗ ಸಹೋದರರ ಜೊತೆಗೂಡಿ ಪತಿ ತನ್ನ ಪತ್ನಿಯನ್ನು ರಾಡ್​​ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಮೃತ ಮಹಿಳೆ

ಘಟನಾ ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆಯ ಮೃತದೇಹವನ್ನು ಖಾನಾಪುರ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ.

ಓದಿ: ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ರೆಹಮಾನ್​ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.

ಓದಿ: ಒಬ್ಬನನ್ನ ಪ್ರೀತಿಸಿ ಮತ್ತೊಬ್ಬನೊಂದಿಗೆ ಮದುವೆ.. ಯುವತಿ ಕೊಲೆ ಮಾಡಿದ ಲವರ್​!

ABOUT THE AUTHOR

...view details