ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ‌ ವಿರುದ್ಧ ಹೆಬ್ಬಾಳ್ಕರ್ ಪರೋಕ್ಷ ವಾಗ್ದಾಳಿ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ನಮ್ಮ‌ಕೆಲ ಶಾಸಕರಿಗೆ 20, 30 ಹಾಗೂ 40 ಕೋಟಿ ರೂ. ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಮುಂಬೈ ಹಾಗೂ ದೆಹಲಿಗೆ ಓಡಾಡುತ್ತಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ರಮೇಶ ಜಾರಕಿಹೊಳಿ ಕಾಲೆಳೆದರು.

ಲಕ್ಷ್ಮಿ ಹೆಬ್ಬಾಳ್ಕರ್

By

Published : Apr 19, 2019, 1:35 PM IST

ಬೆಳಗಾವಿ: ಬಿಜೆಪಿಯಿಂದ ಕೋಟ್ಯಂತರ ರೂ. ಹಣ ಪಡೆದಿರುವ ನಮ್ಮ‌ ಪಕ್ಷದ ಕೆಲ ಶಾಸಕರು ಮುಂಬೈ ಹಾಗೂ ದೆಹಲಿಗೆ ಓಡೋಡಿ ಹೋಗುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ನಮ್ಮ‌ಕೆಲ ಶಾಸಕರಿಗೆ 20, 30 ಹಾಗೂ 40 ಕೋಟಿ ರೂ. ಹಣ ನೀಡಿದ್ದಾರೆ. ಈ ಎಲ್ಲ ಶಾಸಕರು ಮುಂಬೈ ಹಾಗೂ ದೆಹಲಿಗೆ ಓಡಾಡುತ್ತಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ರಮೇಶ ಜಾರಕಿಹೊಳಿ ಕಾಲೆಳೆದರು.

ಲಕ್ಷ್ಮಿ ಹೆಬ್ಬಾಳ್ಕರ್

ಬಿಜೆಪಿಯವರು ನಮಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದೇನೆ.‌ ಮೋದಿ ಅವರ ಅಚ್ಛೆ ದಿನವೂ ಬರಲಿಲ್ಲ, 15 ಲಕ್ಷ ಅಕೌಂಟಿಗೂ ಬರಲಿಲ್ಲ. ಅವರ ಅವಧಿಯಲ್ಲಿ 10 ಲಕ್ಷ ಸೂಟ್ ಬೂಟ್ ಹಾಕಿಕೊಂಡು ವಿದೇಶದಲ್ಲಿ ಓಡಾಡಿದ್ದಾರೆ ಎಂದು ದೂರಿದರು.

ABOUT THE AUTHOR

...view details