ಕರ್ನಾಟಕ

karnataka

ETV Bharat / state

ಬೆಳಗಾವಿಗೂ ತಗುಲಿದ ವರುಣನ ಶಾಪ : ಜಾನುವಾರುಗಳಿಗೆ ಮೇವು ವಿತರಣೆ

ಬೆಳಗಾವಿ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಖಾನಾಪೂರ ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ತೊಂದರೆಗೆ ಒಳಗಾದ ಜನರನ್ನು ಸಂರಕ್ಷಿಸಿ ತರುವುದು ನಮ್ಮ ಕೆಲಸ ಎಂದು ನೂಡಲ್ ಅಧಿಕಾರಿ ಜಿ ಡಿ ಗುಂಡ್ಲುರ ಹೇಳಿದರು.

ಬೆಳಗಾವಿಗೂ ತಗುಲಿದ ವರಣ ಶಾಪ

By

Published : Aug 6, 2019, 8:56 PM IST

Updated : Aug 7, 2019, 2:48 PM IST

ಬೆಳಗಾವಿ :ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಖಾನಾಪೂರ ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.

ನಗರದ ಮುಖ್ಯ ರಸ್ತೆಯಾದ ಬೆಳಗಾವಿ - ಪುಣೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಗಳೂರು, ಮಂಗಳೂರು, ಉಡುಪಿ, ಹುಬ್ಬಳಿ ಧಾರವಾಡದಿಂದ ಮುಂಬೈಗೆ ತೆರಳುವ ಬಸ್ ಹಾಗೂ ಲಾರಿಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಬೆಳಗಾವಿಗೂ ತಗುಲಿದ ವರಣ ಶಾಪ

ಜಾನುವಾರುಗಳಿಗೆ ಮೇವು ವಿತರಣೆ

ಕೃಷ್ಣಾ ನದಿ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ಗಂಜಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಜೊತೆಗೆ ದನಕರುಗಳಿಗೆ ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಾಧಿಕಾರಿಗಳು ಮೇವಿನ ವ್ಯವಸ್ಥೆ ಮಾಡಿದ್ದಾರೆ. ಇಂಗಳಗಾಂವ್​, ಸಪ್ತಸಾಗರ, ತೀರ್ಥ ಗ್ರಾಮಗಳ ನಡುಗಡ್ಡೆಯಲ್ಲಿ ಸಿಲುಕಿರುವ ದನಕರುಗಳಿಗೆ ಮೇವು ವಿತರಣೆ ಮಾಡಿದ್ದು, ತೊಂದರೆಗೆ ಒಳಗಾದ ಜನರನ್ನು ಸಂರಕ್ಷಿಸಿ ತರುವುದು ನಮ್ಮ ಕೆಲಸ ಎಂದು ನೂಡಲ್ ಅಧಿಕಾರಿ ಜಿ ಡಿ ಗುಂಡ್ಲುರ ಹೇಳಿದರು.

Last Updated : Aug 7, 2019, 2:48 PM IST

ABOUT THE AUTHOR

...view details