ಚಿಕ್ಕೋಡಿ :ಗ್ರಾಮ ಪಂಚಾಯತಿ ಚುನಾವಣಾ ವಿಜಯೋತ್ಸವ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾಪುರ ಗ್ರಾಮದಲ್ಲಿನಡೆದಿದೆ.
ಸೋತ ಅಭ್ಯರ್ಥಿ ಮನೆ ಮುಂದೆ ಗೆದ್ದ ವ್ಯಕ್ತಿ ವಿಜಯೋತ್ಸವ ಆಚರಿಸಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯ ಕಂಡಿದೆ.
ಕೊಲೆಯಲ್ಲಿ ಅಂತ್ಯವಾದ ಗ್ರಾ.ಪಂ ಚುನಾವಣಾ ವಿಜಯೋತ್ಸವ ಸುಲ್ತಾನಪೂರ ಗ್ರಾಮದ ಬಶೀರ ಮುಲ್ಲಾ, ಶಬ್ಬೀರ ಮುಲ್ಲಾ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದ ಸ್ಪರ್ಧಿಗಳು. ಚುನಾವಣೆಯಲ್ಲಿ ಬಶೀರ ಮುಲ್ಲಾಗೆ ಗೆಲುವಾಗಿದ್ದು, ಶಬ್ಬೀರ ಮುಲ್ಲಾಗೆ ಸೋಲಾಗಿತ್ತು. ಈ ಗಲಾಟೆಯಲ್ಲಿ ಗೆದ್ದ ಬಶೀರ ಮುಲ್ಲಾನ ಸಹೋದರ ಶಾನೂರ ಮುಲ್ಲಾ (50) ಸಾವಿಗೀಡಾಗಿದ್ದಾನೆ.
ಶಬ್ಬೀರ ಮುಲ್ಲಾ ಸಂಬಂಧಿಕರು ಶಾನೂರ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಒಂದು ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಪಟ್ಟ 6 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.