ಬೆಳಗಾವಿ:ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ.
ಗೋಕಾಕ್ ದನದಪೇಟೆಗೆ ನುಗ್ಗಿದ ನೀರು: ಆತಂಕದಲ್ಲಿ ಕರದಂಟು ನಗರಿ ಜನ
ಗೋಕಾಕ್ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ನಗರದ ಹೊರವಲಯದಲ್ಲಿನ ದನದಪೇಟೆಗೆ ನೀರು ನುಗ್ಗಿದ್ದು, ಸುತ್ತಮುತ್ತಲಿನ ಮನೆ ಹಾಗೂ ಅಂಗಡಿಗಳು ಜಲಾವೃತಗೊಂಡಿವೆ.
ಗೋಕಾಕ್ ದನದ ಪೇಟೆಗೆ ನುಗ್ಗಿದ ನೀರು
40 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕರದಂಟು ನಗರಿ ಗೋಕಾಕ್ ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಏಕಾಏಕಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಗೋಕಾಕ್ ನಗರದ ಹೊರವಲಯದಲ್ಲಿನ ದನದಪೇಟೆಗೆ ನೀರು ನುಗ್ಗಿದೆ. ಅಲ್ಲಿನ ಸುತ್ತಮುತ್ತಲಿನ ಮನೆ ಹಾಗೂ ಅಂಗಡಿಗಳು ಜಲಾವೃತಗೊಂಡಿವೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ಗೋಕಾಕ್ ಈ ಸಲವೂ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಯೇ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.