ಕರ್ನಾಟಕ

karnataka

ETV Bharat / state

‘‘ಅತ್ಯಾಚಾರ ತಡೆಯಲಾಗದಿದ್ರೆ.... ?’’: ರಮೇಶ್ ‌ಕುಮಾರ್ ಸಾಂದರ್ಭಿಕ ಹೇಳಿಕೆ ಹಿಂದಿನ ಮರ್ಮವೇನು? - Former Speaker Ramesh Kumar

'ರಮೇಶ್ ಕುಮಾರ್ ಅವರೇ ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ’’ಲೆಟ್ಸ್ ಎಂಜಾಯ್ ದ ಸಿಚುವೇಷನ್ ಅನ್ನೋ ರೀತಿಯಲ್ಲಿದೆ’’. ಸದನ ನಿಯಂತ್ರಿಸುವುದೇ ಕಷ್ಟವಾಗಿದೆ' ಎಂದು ಸ್ಪೀಕರ್​ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್​ ಕುಮಾರ್​ ಅತ್ಯಾಚಾರ ತಡೆಯಲಾಗದಿದ್ರೆ ಮಲಗಿ ಆನಂದಿಸಬೇಕು ಎಂದಿದ್ದಾರೆ.

Former Speaker Ramesh Kumar sensitive statement in assembly
ಮಾಜಿ ಸ್ಪೀಕರ್ ರಮೇಶ್ ‌ಕುಮಾರ್

By

Published : Dec 16, 2021, 10:20 PM IST

ಬೆಳಗಾವಿ: ಅತ್ಯಾಚಾರ ತಡೆಯಲಾಗದಿದ್ರೆ ಮಲಗಿ ಆನಂದಿಸಬೇಕು ಎಂದು ಚರ್ಚೆಯ ವಿಷಯವೊಂದಕ್ಕೆ ಸಂಬಂಧಿಸಿದಂತೆ ಸಂದರ್ಭೋಚಿತವಾಗಿ ಸ್ಪೀಕರ್ ರಮೇಶ್ ‌ಕುಮಾರ್ ಸದನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಅದೀಗ ರಾಜ್ಯದಲ್ಲಿ ಚರ್ಚೆಯ ವಿಚಾರವಾಗಿ ಮಾರ್ಪಟ್ಟಿದೆ.

ನಿಯಮ 69 ಅಡಿ ಅಕಾಲಿಕ ಮಳೆಯಿಂದ ಆದ ಹಾನಿ ಹಾಗೂ ಪರಿಹಾರ ಕುರಿತು‌ ನಡೆಯುತ್ತಿದ್ದ ಚರ್ಚೆಗೆ ಹೆಚ್ಚಿನ ಸಮಯ ನೀಡಬೇಕು. ಸದನದಲ್ಲಿ ಮಾತನಾಡಲು ನಮಗೂ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎಲ್ಲರೂ ಮಾತನಾಡಬೇಕು ಎಂದರೆ ಹೇಗೆ? ನಾನು ಗಮನ ಸೆಳೆಯುವ ಸೂಚನೆಗಳನ್ನು ಮಂಡಿಸಬೇಕಿದೆ ಎಂದರು. ಆಗ ಕೆಲ ಸದಸ್ಯರು ಎದ್ದುನಿಂತು ಮಾತನಾಡಲು ನಮಗೂ ಅವಕಾಶ ಕೊಡಬೇಕು ಎಂದರು.

ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಭುವನ ಸುಂದರಿ ಹರ್ನಾಜ್ ಸಂಧುಗೆ ಕ್ವಾರಂಟೈನ್

ಎಲ್ಲರೂ ಮಾತನಾಡಿದರೆ ಗಮನ ಸೆಳೆಯುವ ಸೂಚನೆ ಮಂಡಿಸಲು ಆಗುವುದಿಲ್ಲ. ಗಮನ ಸೆಳೆಯುವ ಸೂಚನೆ ಮಂಡಿಸುವುದು ಬೇಡ ಎನ್ನುವುದಾದರೆ ತಾವೆಲ್ಲರೂ ಮಾತನಾಡಬಹುದು ಎಂದರು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದಾಗ ಕೆಲ ಸದಸ್ಯರು ನಾನು ಮಾತನಾಡಬೇಕು, ನಾನು ಮಾತನಾಡಬೇಕು ಎಂದು ಪಟ್ಟು ಹಿಡಿದರು.

ನನ್ನದೇನು ಅಭ್ಯಂತರ ಇಲ್ಲ, ನೀವೆಲ್ಲರೂ ಮಾತನಾಡಬಹುದು. 'ರಮೇಶ್ ಕುಮಾರ್ ಅವರೇ ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್ ದ ಸಿಚುವೇಷನ್ ಅನ್ನೋ ರೀತಿಯಲ್ಲಿದೆ. ಸದನ ನಿಯಂತ್ರಿಸುವುದೇ ಕಷ್ಟವಾಗಿದೆ' ಎಂದರು.

ಸ್ಪೀಕರ್ ‌ಹೆಸರು ಉಲ್ಲೇಖಿಸುತ್ತಿದ್ದಂತೆ ಎದ್ದುನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಒಂದು ಮಾತಿದೆ, ವೆನ್‌ ರೇಪ್‌ ಈಸ್‌ ಇನ್‌ಎವಿಟೇಬಲ್​, ಲೈ ಬ್ಯಾಕ್​​​ ಅಂಡ್​ ಎಂಜಾಯ್​ ಇಟ್​​('When rape is inevitable, lie back and enjoy it) ಎಂದರು. ಆಗ ಮುಗುಳ್ನಗೆ ಬೀರಿದ ಸ್ಪೀಕರ್ ಹೆಗಡೆ, ಚರ್ಚೆ ಆರಂಭಿಸುವಂತೆ ಸದಸ್ಯರಿಗೆ ತಿಳಿಸಿದರು.

ABOUT THE AUTHOR

...view details