ಕರ್ನಾಟಕ

karnataka

ETV Bharat / state

ಮನೆ ಬಿದ್ದರೇನು...ಗೋಡೆ ಕುಸಿದರೇನು..ಗಣೇಶನಿಗಿಲ್ಲ ವಿಘ್ನ..ನೆರೆ ಸಂತ್ರಸ್ತರಿಂದಲೂ ಪೂಜೆ..! - chikkodiganeshanews

ಮನೆಗಳನ್ನು ಕಳೆದುಕೊಂಡರೂ ನೆರೆ ಸಂತ್ರಸ್ತರು ಕೂಡ ಗಣೇಶ ಚತುರ್ಥಿಯನ್ನು ಆಚರಿಸಿದ್ದಾರೆ.

ವಿಘ್ನ ವಿನಾಶಕನಿಗೆ ನೆರೆ ಸಂತ್ರಸ್ತರಿಂದಲೂ ಪೂಜೆ..!

By

Published : Sep 3, 2019, 2:39 PM IST

ಚಿಕ್ಕೋಡಿ:ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡರೂ ವಿಘ್ನನಿವಾರಕನಿಗೆ ಪೂಜೆ ಅಂತೂ ನಿಂತಿಲ್ಲ, ಗಣೇಶ ಚತುರ್ಥಿಯನ್ನು ನೆರೆ ಸಂತ್ರಸ್ತರು ಕೂಡ ಆಚರಿಸಿದ್ದಾರೆ.

ಮನೆ ಬಿದ್ದರೂ ಶೆಡ್​​ನಲ್ಲಿಯೇ ಗಣೇಶನಿಗೆ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಇಂಗಳಿ, ಮಾಂಜರಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಇತ್ತೀಚೆಗೆ ಕೃಷ್ಣಾನದಿಗೆ ಭಾರಿ ಪ್ರವಾಹದಿಂದ ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೆ ಈ ಮಧ್ಯೆಯೂ ಗಣೇಶ ಚತುರ್ಥಿ ಆಚರಿಸಿದ್ದಾರೆ.

ವಿಘ್ನ ವಿನಾಶಕನಿಗೆ ನೆರೆ ಸಂತ್ರಸ್ತರಿಂದಲೂ ಪೂಜೆ..!

ದೇವರು ನಮಗೆ ಇಷ್ಟೊಂದು ಕಷ್ಟವನ್ನು ಕೊಟ್ಟರು ನಾವು ದೇವರನ್ನು ಮರೆಯುವುದಿಲ್ಲ ಎಂದು ಬಿದ್ದ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದರ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾರೆ.

ABOUT THE AUTHOR

...view details