ಕರ್ನಾಟಕ

karnataka

ETV Bharat / state

ಹಿಡಕಲ್ ಜಲಾಶಯ ನಿರ್ಮಾಣ: ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸುವಂತೆ ರೈತರ ಆಗ್ರಹ

ಹಿಡಕಲ್ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತರ ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸರ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

By ETV Bharat Karnataka Team

Published : Nov 17, 2023, 2:08 PM IST

Farmers protest
ಹಿಡಕಲ್ ಜಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸುವಂತೆ ರೈತರ ಆಗ್ರಹ

ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸುವಂತೆ ರೈತರ ಆಗ್ರಹ

ಬೆಳಗಾವಿ:ಹಿಡಕಲ್ ಜಲಾಶಯ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ವಿತರಿಸಿ, ನ್ಯಾಯ ಒದಗಿಸುವಂತೆ ಆಗ್ರಹಿಸಿ ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ''58 ಕುಟುಂಬಗಳು ಹಿಡಕಲ್ ಜಲಾಶಯ ನಿರ್ಮಾಣಕ್ಕೆ 43 ವರ್ಷಗಳ ಹಿಂದೆ ರೈತರು ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟಿದ್ದಾರೆ. ಆದರೆ, ಈವರೆಗೂ ತಮಗೆ ಸರ್ಕಾರದಿಂದ ನಮಗೆ ನ್ಯಾಯ ಲಭಿಸಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರು ಸರ್ಕಾರಕ್ಕೆ ಡಿ.1ರೊಳಗೆ ಗಡುವು ನೀಡಿದ್ದು, ಆಗಲೂ ತಮಗೆ ನ್ಯಾಯ ಸಿಗದಿದ್ದರೆ, ಆತ್ಮಹತ್ಯೆ ಹಾದಿ ಹಿಡಿಯುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

''ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ‌ ತವರು ಕ್ಷೇತ್ರದಲ್ಲೇ ಸರ್ಕಾರದಿಂದ ರೈತರಿಗೆ ಅನ್ಯಾಯವಾಗಿದೆ. ಬೆಳಗಾವಿ ತಾಲೂಕಿನ ಹೊಸಇದ್ದಲಹೊಂಡ ( ಶಿವಾಪೂರ), ಹುಕ್ಕೇರಿ ತಾಲೂಕಿನ ಹೊಸವಂಟಮೂರಿ, ಗುಡಗನಟ್ಟಿ, ದಡ್ಡಿಗುಡಗನಟ್ಟಿ, ಬೀರನಹೊಳಿ, ಸುತಗಟ್ಟಿ, ಇಸ್ಲಾಂಪೂರ ಗ್ರಾಮದ 58 ಕುಟುಂಬಗಳು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಸುಮಾರು 200 ಏಕರೆ ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ಈ ರೈತರಿಗೆ ಕೇವಲ ಕಾಗದ ರೂಪದಲ್ಲಿ ಮಾತ್ರ ಭೂಮಿ ಮಂಜೂರಾಗಿದೆ. ಆದರೆ, ವಾಸ್ತವವಾಗಿ ರೈತರಿಗೆ ಈ ಭೂಮಿಯನ್ನು ಎಲ್ಲಿ ನೀಡಲಾಗಿದೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರೆ, ಇದಕ್ಕೆ ಸರಿಯಾದ ಉತ್ತರವನ್ನು ನೀಡುತ್ತಿಲ್ಲ. ಪಹಣಿ ಪತ್ರ ಕೂಡ ಅಧಿಕಾರಿಗಳು ಕೊಡುತ್ತಿಲ್ಲ'' ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಳಲು ತೋಡಿಕೊಂಡ ರೈತ:ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ನೊಂದ ರೈತ ಮಡ್ಡೆಪ್ಪ ಭರಮಾ ಪೂಜಾರಿ, ''ಹೊಲ- ಮನೆ ಕಳೆದುಕೊಂಡು 43 ವರ್ಷಗಳಿಂದ ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಅಧಿಕಾರಿಗಳಿಗೆ ಮನವಿ ಕೊಟ್ಟು ಸಾಕಾಗಿ ಹೋಗಿದೆ. ಈಗ ನಮ್ಮ ಮುಂದಿರುವುದು ಆತ್ಮಹತ್ಯೆ ಒಂದೇ'' ಎಂದು ಅಳಲು ತೋಡಿಕೊಂಡರು.

ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ:ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ''ಭೂಮಿ‌ ಸಿಗದೇ ಈ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದುಃಸ್ಥಿತಿ ಸರ್ಕಾರ ತಂದಿದೆ. ಡಿ.1ರೊಳಗೆ ಸಂತ್ರಸ್ತರಿಗೆ ಕೊಟ್ಟಿರುವ ಭೂಮಿ ಎಲ್ಲಿದೆ ಗುರುತಿಸಿ ಅವರ ಸುಪರ್ದಿಗೆ ನೀಡಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಮುಂದೆ 58 ಕುಟುಂಬಗಳು ಅಹೋರಾತ್ರಿ ಧರಣಿ ನಡೆಸಲಿವೆ'' ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ: ಬೆಸ್ಕಾಂಗೆ ದಂಡ ಕಟ್ಟಿದ ಹೆಚ್‌.ಡಿ.ಕುಮಾರಸ್ವಾಮಿ

ABOUT THE AUTHOR

...view details