ಕರ್ನಾಟಕ

karnataka

By

Published : Jun 26, 2020, 6:44 PM IST

ETV Bharat / state

ಬೆಳಗಾವಿ; ಗೋಮಾಳ ಅತಿಕ್ರಮಣ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಬಿಜಗರ್ಣಿ ಗ್ರಾಮದಲ್ಲಿ 72 ಎಕರೆ ಗೋಮಾಳ ಜಮೀನಿದ್ದು, ಜಾನುವಾರುಗಳನ್ನು ಮೇಯಿಸುವ ಆ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಹೀಗಾಗಿ ಅದನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

Protest
ಪ್ರತಿಭಟನೆ

ಬೆಳಗಾವಿ: ನ್ಯಾಯಾಲಯದ ಆದೇಶದಂತೆ ಬಿಜಗರ್ಣಿ ಗ್ರಾಮದಲ್ಲಿರುವ ಗೋಮಾಳ ಜಾಗವನ್ನು ಜಾನುವಾರುಗಳಿಗೆ ಮೇಯಿಸಲು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜಗರ್ಣಿ ಗ್ರಾಮಸ್ಥರ ಮಂಡಳಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ ತಾಲೂಕಿನ ವ್ಯಾಪ್ತಿಗೆ ಒಳಪಡುವ ಬಿಜಗರ್ಣಿ ಗ್ರಾಮದಲ್ಲಿ ಸುಮಾರು 72 ಎಕರೆ ಗೋಮಾಳ ಜಮೀನಿದೆ. ಈ ಜಮೀನು ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಗ್ರಾಮದ ಜಾನುವಾರುಗಳನ್ನು ಮಾತ್ರ ಮೇಯಿಸಲು ಮೀಸಲಿಟ್ಟ ಪ್ರದೇಶವಾಗಿದೆ. ಆದರೆ, ಕೆಲವರು ಕುತಂತ್ರದಿಂದ ಜಮೀನನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಬಿಜಗರ್ಣಿ ಗ್ರಾಮಸ್ಥರ ಪ್ರತಿಭಟನೆ

ಗೋಮಾಳವನ್ನು ಅಕ್ರಮವಾಗಿ ವ್ಯವಸಾಯ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಮಸ್ಯೆ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯ ಕೂಡ ಜಾನುವಾರುಗಳನ್ನು ಮೇಯಿಸಲು ಮಾತ್ರ ಬಳಸಿಕೊಳ್ಳಬೇಕು. ಇನ್ನಿತರ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು ಎಂದು ಆದೇಶ ನೀಡಿದೆ ಎಂದು ವಿವರಿಸಿದರು.

ಹೀಗಾಗಿ, ಜಮೀನನ್ನು ಅತಿಕ್ರಮಿಸುವ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಲ್ಲದೇ ಇದೇ ಜೂ.29ರಂದು ಬಿಜಗರ್ಣಿ ಗ್ರಾಮದ ಎಲ್ಲ ಜಾನುವಾರುಗಳನ್ನು ತೆಗೆದುಕೊಂಡು ಗೋಮಾಳಕ್ಕೆ ಮೇಯಿಸಲು ಹೋಗಲಾಗುತ್ತಿದ್ದು, ಪೊಲೀಸರು ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details