ಕರ್ನಾಟಕ

karnataka

ETV Bharat / state

ಬೆಳಗಾವಿ: ಕ್ವಾರಂಟೈನ್ ಆಗಲು ಸೋಂಕಿತನ ಕುಟುಂಬಸ್ಥರ ಹಿಂದೇಟು - ಮೂರು ವರ್ಷದ ಮಗು

ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಮೂರು ವರ್ಷದ ಮಗುವಿಗೆ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿತ ಮಗುವನ್ನು ನಿನ್ನೆಯೇ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ದಾಖಲಿಸಲಾಗಿದೆ. ಆದರೆ ಒಂದು ದಿನ ಕಳೆದರೂ ಸೋಂಕಿತನ ಕುಟುಂಬದ ಆರು ಜನ ಸದಸ್ಯರು ಕ್ವಾರಂಟೈನ್ ಆಗಲು ಹಿಂದೇಟು ಹಾಕುತ್ತಿದ್ದಾರೆ.

ಕ್ವಾರಂಟೈನ್
ಕ್ವಾರಂಟೈನ್

By

Published : Jun 1, 2020, 11:38 PM IST

ಬೆಳಗಾವಿ:ಕೊರೊನಾ ಸೋಂಕಿತನ ಕುಟುಂಬಸ್ಥರು ಕ್ವಾರಂಟೈನ್ ಆಗಲು ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಮೂರು ವರ್ಷದ ಮಗುವಿಗೆ ನಿನ್ನೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿತ ಮಗುವನ್ನು ನಿನ್ನೆಯೇ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ದಾಖಲಿಸಲಾಗಿದೆ. ಆದರೆ ಒಂದು ದಿನ ಕಳೆದರೂ ಸೋಂಕಿತನ ಕುಟುಂಬದ ಆರು ಜನ ಸದಸ್ಯರು ಕ್ವಾರಂಟೈನ್ ಆಗಲು ಹಿಂದೇಟು ಹಾಕುತ್ತಿದ್ದಾರೆ.

ಕುಟುಂಬಸ್ಥರನ್ನು ಕ್ವಾರಂಟೈನ್​ ಮಾಡಲು ಅಧಿಕಾರಿಗಳ ಪ್ರಯತ್ನ

ಪಿಡಿಓ ಸೇರಿದಂತೆ ಗ್ರಾಮಸ್ಥರು ಹೇಳಿದರು ಕುಟುಂಬಸ್ಥರು ಕ್ಯಾರೆ ಎನ್ನುತ್ತಿಲ್ಲ. ಸದ್ಯ ಕುಟುಂಬಸ್ಥರು ಮನೆಯಿಂದ ಹೊರ ಬರದಿದಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಪೊಲೀಸರನ್ನು ಕರೆಸಿ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡುವಂತೆ ಗ್ರಾಮಸ್ಥರು ‌ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details