ಅಥಣಿ:ಕಳೆದ ಒಂದು ತಿಂಗಳಿನಿಂದ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಗೌಡರ ತೋಟದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ನೀರಿಲ್ಲದೆ ಪರದಾಡುವಂತಾಗಿತ್ತು.
ಈಟಿವಿ ಭಾರತ ಇಂಪ್ಯಾಕ್ಟ್: ಡಿಸಿಎಂ ಕ್ಷೇತ್ರದ ಶಾಲೆಯ ಬೋರ್ವೆಲ್ ಸರಿಪಡಿಸಿದ ತಾಲೂಕು ಆಡಳಿತ - ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ
ಕಳೆದ ಒಂದು ತಿಂಗಳಿನಿಂದ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಗೌಡರ ತೋಟದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ನೀರಿಲ್ಲದೆ ಪರದಾಡುವಂತಾಗಿತ್ತು.
ಇದನ್ನು ಅರಿತು ಈಟಿವಿ ಭಾರತ ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ: ಅಧಿಕಾರಿಗಳು ಡೋಂಟ್ ಕೇರ್..! ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ತಾಲೂಕು ಆಡಳಿತ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ ಮಾಡಿದೆ.
ಹಲವಾರು ದಿನಗಳಿಂದ ನಿರ್ವಹಣೆ ಇಲ್ಲದೆ ಬಂದ್ ಆಗಿದ್ದ ಶಾಲೆಯ ಬೋರ್ವೆಲ್ ಅನ್ನು ಇಂದು ತಾಲೂಕಾಡಳಿತ ಸರಿಪಡಿಸಿ ಪುನರಾರಂಭ ಮಾಡುವ ಮೂಲಕ ಶಾಲೆಯ ವಾಟರ್ ಟ್ಯಾಂಕ್ಗೆ ನೀರು ತುಂಬಿಸಿದ್ದಾರೆ, ಇದಕ್ಕೆ ಸಾರ್ವಜನಿಕರು ಹಾಗೂ ಶಾಲೆ ಮಕ್ಕಳು ಹರ್ಷ ವ್ಯಕ್ತಪಡಿಸಿ ಈಟಿವಿ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.