ಬೆಳಗಾವಿ: ತೀವ್ರ ಬರಗಾಲ ಅನುಭವಿಸುತ್ತಿರುವ ಜಿಲ್ಲೆಯ ಅನೇಕ ಹಳ್ಳಿಗಳ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಬಿತ್ತಿದ ಬೆಳೆ ಒಣಗಿದ್ದು, ಜನ ಜಾನುವಾರುಗಳಿಗೂ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ರೈತರು ಜಾನುವಾರುಗಳನ್ನು ಮಾರಲು ಮುಂದಾಗಿದ್ದಾರೆ.
ಬರಕ್ಕೆ ನಲುಗಿದ ಬೆಳಗಾವಿ ಜಿಲ್ಲೆ ಜನತೆ... ಜಾನುವಾರುಗಳನ್ನು ಮಾರಲು ಮುಂದಾದ ರೈತ! - kannada news
ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಅನಿವಾರ್ಯವಾಗಿ ದಲ್ಲಾಳಿಗಳು ಕೇಳಿದಷ್ಟು ದುಡ್ಡಿಗೆ ಜಾನುವಾರುಗಳನ್ನು ಮಾರುವ ಸ್ಥಿತಿ ರೈತರಿಗೆ ಎದುರಾಗಿದೆ.
ಜಾನುವಾರುಗಳನ್ನು ಮಾರಲು ಮುಂದಾದ ರೈತರು
ಜಿಲ್ಲೆಯಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಎದುರಾಗಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಅನಿವಾರ್ಯವಾಗಿ ದಲ್ಲಾಳಿಗಳು ಕೇಳಿದಷ್ಟು ದುಡ್ಡಿಗೆ ಸಾಕಿದ ಜಾನುವಾರುಗಳನ್ನು ಮಾರುವ ಸ್ಥಿತಿ ರೈತರಿಗೆ ಎದುರಾಗಿದೆ. ಇದಕ್ಕೆ ಮೂಲ ಕಾರಣ ಮೇವಿನ ಕೊರತೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ.
ಬರಗಾಲಕ್ಕೆ ಹೆದರಿ ರೈತರು ತಮ್ಮ ಜಾನುವಾರುಗಳನ್ನು ಮಾರಲು ಮುಂದಾದರೂ ಪೇಟೆಯಲ್ಲಿ ಅವುಗಳನ್ನು ಯಾರೂ ಖರೀದಿ ಮಾಡುವ ಸಾಹಸ ತೋರುತ್ತಿಲ್ಲ. ಇದರಿಂದ ರೈತರು ದಾರಿ ಕಾಣದ ಕುರುಡರಂತಾಗಿದ್ದಾರೆ.