ಬೆಳಗಾವಿ:ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಗೆ, ನಿಖಿಲ್ ಎಲ್ಲಿದಿಯಪ್ಪ? ಎಂದು ಕೇಳಬೇಡಿ, ಆತನನ್ನು ಹುಡುಕಬೇಡಿ. ನಿಖಿಲ್ ಕುಮಾರಸ್ವಾಮಿ ಸಿಕ್ಕಿದ್ದಾನೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು.
ನಿಖಿಲ್ ಎಲ್ಲಿದ್ದಿಯಪ್ಪಾ ಎಂದು ಕೇಳಬೇಡಿ, ನಿಖಿಲ್ ಸಿಕ್ಕಿದ್ದಾನೆ: ಅನಂತಕುಮಾರ್ ಹೆಗಡೆ ವ್ಯಂಗ್ಯ - undefined
ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕುರಿತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ
ಅನಂತಕುಮಾರ್ ಹೆಗಡೆ ವ್ಯಂಗ್ಯ
ಕಿತ್ತೂರಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಎಂದು ಬರೆಸಿರುವ ಟೀ ಶರ್ಟ್ ನೀಡಲಾಗಿತ್ತು. ಅದರ ಜತೆಗೆ ಮದ್ಯದ ಬಾಟಲಿಯನ್ನೂ ಕೈಗಿಡಲಾಗಿತ್ತು. ಯುವಕನೊಬ್ಬ ಮದ್ಯ ಸೇವಿಸಿ ರಸ್ತೆ ಮೇಲೆ ಬಿದ್ದಿದ್ದ. ಆ ವ್ಯಕ್ತಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್ ಸಿಕ್ಕಿದ್ದಾನೆ ಎಂದು ಟ್ರೋಲ್ ಮಾಡಲಾಗಿದೆ ಎನ್ನುವ ಮೂಲಕ ಕಾರ್ಯಕರ್ತರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷವನ್ನು ಟೀಕಿಸಿದರು.