ಕರ್ನಾಟಕ

karnataka

By

Published : Jun 22, 2021, 6:52 PM IST

Updated : Jun 22, 2021, 7:10 PM IST

ETV Bharat / state

ರಮೇಶ್ ಜಾರಕಿಹೊಳಿ‌ ಮುಂಬೈ ಪ್ರವಾಸದ ಬಗ್ಗೆ ನನ್ನನೇನೂ ಕೇಳಬೇಡಿ: ಸಚಿವ ಗೋವಿಂದ ಕಾರಜೋಳ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೇಂದ್ರ ನಾಯಕರು ಚಿಂತನೆ ಮಾಡಿಲ್ಲ. ಯಡಿಯೂರಪ್ಪನವರೇ ಅವಧಿ ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲ್ಲ ಎಂದು ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಇದೇ ವೇಳೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಮುಂಬೈ ಪ್ರವಾಸದ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು.

minister-govinda-karajola
ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಅವರ ಮುಂಬೈ ಪ್ರವಾಸದ ಬಗ್ಗೆ ನನ್ನನೇನೂ ಕೇಳಬೇಡಿ. ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಗ್ಗೆ ಏನೂ ಬೇಕಾದರೂ ಕೇಳಿ ಪ್ರತಿಕ್ರಿಯೆ ನೀಡುತ್ತೇನೆ. ಆದರೆ ರಮೇಶ್ ಜಾರಕಿಹೊಳಿ‌ ಬಗ್ಗೆ ಏನೂ ಹೇಳಲಾರೆ ಎಂದು ನುಣುಚಿಕೊಂಡರು.

ಸಚಿವ ಗೋವಿಂದ ಕಾರಜೋಳ ಮಾತನಾಡಿದರು

ಸಿಎಂ ಕುರ್ಚಿಗಾಗಿ ಮೂರು ಗುಂಪುಗಳ ಮಧ್ಯೆ ಪೈಪೋಟಿ:ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್​ನಲ್ಲಿ ಮೂರು ಗುಂಪುಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಖರ್ಗೆ-ಪರಮೇಶ್ವರ ಗುಂಪಿನ‌ ಮಧ್ಯೆ ಪೈಪೋಟಿ ನಡೆದಿದೆ. ಈ ಮಧ್ಯೆ ಶಾಮನೂರ ಶಿವಶಂಕರಪ್ಪ ಕೂಡ ನಾನೂ ಸಿಎಂ ರೇಸ್ ನಲ್ಲಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರ ಕನಸು ನನಸಾಗಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಮತ್ತಷ್ಟು ಹೀನಾಯವಾಗಲಿದೆ. ಕಾಂಗ್ರೆಸ್ ನಲ್ಲಿರುವ ಮೂರು ಪ್ರಬಲ ಗುಂಪುಗಳ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಗೆಲ್ಲದೆ ಕಾಂಗ್ರೆಸ್ ನಲ್ಲಿ ಈಗಲೇ ಸಿಎಂ ಕುರ್ಚಿಗಾಗಿ ಕಚ್ಚಾಟ ಶುರುವಾಗಿದೆ ಎಂದು ಕಾರಜೋಳ ಲೇವಡಿ ಮಾಡಿದ್ರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೇಂದ್ರ ನಾಯಕರು ಚಿಂತನೆ ಮಾಡಿಲ್ಲ. ಯಡಿಯೂರಪ್ಪನವರೇ ಅವಧಿ ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಓದಿ:ಮಂಗಳೂರು ಪೊಲೀಸ್ ‌ಕಮಿಷನರ್ ನೇತೃತ್ವದಲ್ಲಿ ಸಿಟಿ ರೌಂಡ್ಸ್​​-ನಿಯಮ ಉಲ್ಲಂಘಿಸಿದವರಿಗೆ ದಂಡ

Last Updated : Jun 22, 2021, 7:10 PM IST

ABOUT THE AUTHOR

...view details