ಅಥಣಿ:ದೀಪಗಳ ಹಬ್ಬ ದೀಪಾವಳಿ. ಈ ಹಬ್ಬವನ್ನು ರಾಜ್ಯದ ಗಡಿಭಾಗ ಬೆಳಗಾವಿಯ ಅಥಣಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಮುಂಜಾನೆ ಸೆಗಣಿಯ ಮೂಲಕ ಪಾಂಡವರನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
ಜವಾರಿ ಮಂದಿಯ ಡಿಫರೆಂಟ್ ದೀಪಾವಳಿ: ಇಲ್ಲಿ ಪಾಂಡವರ ಪೂಜೆಯೇ ವಿಶೇಷ! - Special deepavali in Athani
ದೀಪಗಳ ಹಬ್ಬ ದೀಪಾವಳಿ. ಈ ಹಬ್ಬವನ್ನು ರಾಜ್ಯದ ಗಡಿಭಾಗ ಬೆಳಗಾವಿಯ ಅಥಣಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಮುಂಜಾನೆ ಸೆಗಣಿಯ ಮೂಲಕ ಪಾಂಡವರನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
ಜವಾರಿ ಮಂದಿಯ ಡಿಫೆರೆಂಟ್ ದೀಪಾವಳಿ
ಇಂದು ಪಾಂಡವರು ವನವಾಸ ಮುಗಿಸಿ ಮರಳಿ ಬಂದ ದಿನವೆಂಬುದು ಇಲ್ಲಿನ ಜನರ ನಂಬಿಕೆ. ಈ ಹಿನ್ನೆಲೆಯಲ್ಲಿ ಮುಂಜಾನೆ ಸೆಗಣಿಯ ಮೂಲಕ ಪಾಂಡವರನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
ಮನೆ ಮಂದಿ ಎಣ್ಣೆ ಸ್ನಾನ ಮಾಡಿ, ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಅಷ್ಟೇ ಅಲ್ಲದೆ ಹೆಣ್ಣುಮಕ್ಕಳು ಮನೆಯ ಗಂಡಸರಿಗೆ ಆರತಿ ಬೆಳಗುತ್ತಾರೆ. ಇನ್ನು ಹಬ್ಬದೂಟವಾಗಿ ಶಾವಿಗೆ ಪಾಯಸ ಕಡ್ಡಾಯವಂತೆ. ಇದು ಉತ್ತರ ಕರ್ನಾಟಕ ಮಂದಿಯ ವಿಶೇಷ ದೀಪಾವಳಿ ಹಬ್ಬ.