ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಮಳೆರಾಯನ ಕೋಪಕ್ಕೆ ನಲುಗಿದ ಅನ್ನದಾತ - ನೀರಾವರಿ ಯೋಜನೆ

Crop loss due to rain scarcity in Chikkodi: ಚಿಕ್ಕೋಡಿಯಲ್ಲಿ ಮಳೆ ಕೊರತೆಯಿಂದ ಗೋವಿನ ಜೋಳ ಫಸಲಿನ ನೀಡುವ ಹಂತದಲ್ಲಿ ಒಣಗುತ್ತಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಚಿಕ್ಕೋಡಿ
ಚಿಕ್ಕೋಡಿ

By ETV Bharat Karnataka Team

Published : Oct 31, 2023, 7:36 PM IST

ಅನಾವೃಷ್ಟಿ- ರೈತರ ಅಳಲು

ಚಿಕ್ಕೋಡಿ: ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾಗಿ ಮೆಕ್ಕೆಜೋಳ ಬೆಳೆಯುವುದು ವಾಡಿಕೆ. ಸದ್ಯ ಈ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆ ಕೊರತೆಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಗಳು ರೈತನ ಕಣ್ಣ ಮುಂದೆಯೇ ಒಣಗುತ್ತಿವೆ. ಅನ್ನದಾತ ವಿಲಿವಿಲಿ ಒದ್ದಾಡುವಂತಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದು ಲಕ್ಷಾಂತರ ಹೆಕ್ಟೇರ್​ನಲ್ಲಿ ಬೆಳೆದ ಗೋವಿನ ಜೋಳ ಫಸಲಿನ ಅಂಚಿಗೆ ಬಂದು ಒಣಗುತ್ತಿದ್ದು, ರೈತನನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಅಲ್ಪ ಮಳೆಯಲ್ಲಿ ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳು ನೀರಿನ ಅಭಾವದಿಂದ ನೆಲಕಚ್ಚುತ್ತಿವೆ.

ಅಥಣಿ ತಾಲೂಕಿನ ಅನಂತಪುರ ಹೋಬಳಿ ವ್ಯಾಪ್ತಿಯಲ್ಲಿ ರೈತ ಅಶೋಕ್ ಶಿವುಗೌಡ ಪಾಟೀಲ್ ಎಂಬವರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಒಣಗಿ ನಿಂತಿದೆ. ಈ ಬಗ್ಗೆ ಮಾತನಾಡಿರುವ ಅವರು, ಇನ್ನೇನು 30 ರಿಂದ 40 ದಿನಗಳಲ್ಲಿ ಫಸಲು ನಮ್ಮ ಕೈ ಸೇರುವ ಹಂತದಲ್ಲಿತ್ತು. ವಾಡಿಕೆಯಂತೆ ಮಳೆ ಆಗದೇ ಇರೋದ್ರಿಂದ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ಒಣಗುತ್ತಿದೆ. ಒಂದು ಎಕರೆಗೆ ಸುಮಾರು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಒಂದು ಎಕರೆಗೆ 50,000 ರೂ. ಆದಾಯ ಬರುತ್ತಿತ್ತು. ಈ ಬೆಳೆ ನಮ್ಮ ಜೀವಕ್ಕೆ ದಾರಿಯಾಗುತ್ತಿತ್ತು. ಆದರೆ ಮಳೆ ಕೊರತೆಯಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಈ ಪರಿಸ್ಥಿತಿ ಬಂದಿದೆ. ರಾಜಕಾರಣಿಗಳು ನೀರಾವರಿ ಯೋಜನೆಗಳ ಬಗ್ಗೆ ಭರವಸೆಗಳನ್ನು ಮಾತ್ರ ನೀಡುತ್ತಾರೆ. ಆದರೆ ಯಾವುದೇ ನೀರಾವರಿ ಯೋಜನೆಗಳನ್ನು ಈ ಭಾಗಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದರು.

ನಮ್ಮ ಸಂಕಷ್ಟ ದೇವರಿಗೆ ಪ್ರೀತಿ ಎಂಬಂತಾಗಿದೆ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ. ಹಲವು ರಾಜಕೀಯ ನಾಯಕರ ಮೇಲೆ ಭರವಸೆ ಇಟ್ಟರೂ ಎಲ್ಲವೂ ಹುಸಿಯಾಗಿದೆ. ಇದರಿಂದ ನಮಗೆ ದಾರಿ ತೋರದಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಒಣಗಿದ ಬೆಳೆಗಳನ್ನು ಸರ್ವೆ ಮಾಡಿ ಸೂಕ್ತ ಪರಿಹಾರವನ್ನು ನೀಡಬೇಕು. ಹಿಂದೆ ಕೂಡ ಕಬ್ಬು ಬೆಳೆಯು ಕೂಡ ಇದೇ ರೀತಿಯಲ್ಲಿ ಕಮರಿ (ಒಣಗಿ) ಹೋಗಿತ್ತು. ಅಲ್ಪಸ್ವಲ್ಪ ಮಳೆಯಿಂದ ಹಾಗೂ ದೇವರ ಮೇಲೆ ಭಾರವನ್ನು ಹಾಕಿ ಈ ಮೆಕ್ಕೆಜೋಳವನ್ನು ಬೆಳೆಯಲಾಗಿತ್ತು. ಸದ್ಯ ಈ ಬೆಳೆಯೂ ಒಣಗಿ ನಿಂತಿದ್ದು. ನಮಗೆ ನುಂಗಲಾರದ ತುತ್ತಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಲಿ ಎಂದು ಅವರು ಒತ್ತಾಯಿಸಿದ್ದಾರೆ.

ತಾಲೂಕುವಾರು ಮೆಕ್ಕೆಜೋಳ ಬಿತ್ತನೆ ವಿವರ:ಅಥಣಿ 16,155 ಹೆ, ಕಾಗವಾಡ 3,452, ಚಿಕ್ಕೋಡಿ 12,133, ನಿಪ್ಪಾಣಿ 4,558, ಹುಕ್ಕೇರಿ 8,211, ರಾಯಭಾಗ 12,804, ಒಟ್ಟು 92,913 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವನ್ನು ಮಾಡಲಾಗಿದೆ. ಮಳೆ ಅಭಾವದಿಂದ 34,844 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಕಾರ್ಯ ನಡೆದಿಲ್ಲ ಎಂದು ಚಿಕ್ಕೋಡಿ ಕೃಷಿ ಇಲಾಖೆಯ ಅಧಿಕಾರಿ ಎನ್.ಪರಗೌಡರ್ ಮಾಹಿತಿ ನೀಡಿದರು.

ಇದನ್ನೂ ಓದಿ:ಕೊಪ್ಪಳ: ಮಳೆ ಇಲ್ಲದೆ ಒಣಗುತ್ತಿರುವ ಬೆಳೆ, ಬಿಂದಿಗೆ ಹಿಡಿದು ನೀರುಣಿಸುತ್ತಿರುವ ರೈತ; ಬರ ಪರಿಹಾರಕ್ಕೆ ಒತ್ತಾಯ

ABOUT THE AUTHOR

...view details