ಬೆಳಗಾವಿ: ಮಗಳ ಹೆರಿಗೆ ಮಾಡಿಸಲು ಧಾರವಾಡ ಜಿಲ್ಲೆಗೆ ಹೋಗಿ ಬಂದ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ ಕಿತ್ತೂರು ಪಟ್ಟಣದ ರಾವಳ ಓಣಿಯ ವೃದ್ಧೆಗೆ ಕೊರೊನಾ ದೃಢಪಟ್ಟಿದೆ.
ಕಿತ್ತೂರು ಪಟ್ಟಣದ ವೃದ್ಧೆಗೆ ಕೊರೊನಾ ಸೋಂಕು - ಕೊರೊನಾ ಸೋಂಕು
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ರಾವಳ ಓಣಿಯ ವೃದ್ಧೆಗೆ ಕೊರೊನಾ ದೃಢಪಟ್ಟಿದ್ದು, ಆ ಪ್ರದೇಶವನ್ನು ತಾಲೂಕಾಡಳಿತ ಸೀಲ್ಡೌನ್ ಮಾಡಿದೆ.
ಕಿತ್ತೂರು ಪಟ್ಟಣದ ವೃದ್ಧೆಗೆ ಕೊರೊನಾ ಸೋಂಕು
ಕಳೆದ ಹತ್ತು ದಿನಗಳ ಹಿಂದಷ್ಟೇ 66 ವರ್ಷ ವಯಸ್ಸಿನ ಮಹಿಳೆ ಧಾರವಾಡಕ್ಕೆ ಹೋಗಿ ಮರಳಿದ್ದರು. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಇದೀಗ ವರದಿ ಬಂದಿದ್ದು ಮಹಿಳೆಗೆ ಸೋಂಕು ದೃಢಪಟ್ಟಿದೆ.
ಧಾರವಾಡದಿಂದ ಮರಳಿದ ಜಿಲ್ಲೆಯ ಅನೇಕರು ಸೋಂಕಿಗೆ ತುತ್ತಾಗಿದ್ದು, ವೃದ್ಧೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 11 ಜನರು ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ಪಟ್ಟಣದ ರಾವಳ ಓಣಿಯನ್ನು ತಾಲೂಕಾಡಳಿತ ಸೀಲ್ಡೌನ್ ಮಾಡಿದೆ.