ಕರ್ನಾಟಕ

karnataka

ಅಥಣಿ ಪೊಲೀಸ್ ಠಾಣೆಗೆ ಕೊರೊನಾ ಸೋಂಕಿತ ಭೇಟಿ: ಠಾಣೆ ಸೀಲ್​ಡೌನ್​, ಸಿಬ್ಬಂದಿಗೆ ಕ್ವಾರಂಟೈನ್​

ಕೊರೊನಾ ಸೋಂಕಿತ ವ್ಯಕ್ತಿ ಅಥಣಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಯನ್ನು ಸಂಪೂರ್ಣವಾಗಿ ಸೀಲ್​​​ಡೌನ್ ಮಾಡಲಾಗಿದೆ. ಐವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

By

Published : Jul 1, 2020, 12:20 PM IST

Published : Jul 1, 2020, 12:20 PM IST

corona infected person visit to police station
ಅಥಣಿ ಪೊಲೀಸ್ ಠಾಣೆ

ಅಥಣಿ:ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಅಥಣಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಠಾಣೆಯನ್ನು ಸೀಲ್​​ಡೌನ್​ ಮಾಡಲಾಗಿದೆ.

ಸೋಂಕಿಗೆ ಒಳಗಾಗಿದ್ದ ತಾಲೂಕಿನ ಸಂಕೋನಟ್ಟಿ ಗ್ರಾಮದ ಟೆಕ್ಕಿ ಕೋವಿಡ್​​ ಆಸ್ಪತ್ರೆಯಲ್ಲಿ ಜೂನ್​ 28ರಂದು ಮೃತಪಟ್ಟಿದ್ದರು. ಇವರು ತನ್ನ ಮಡದಿ ಕಾಣೆಯಾಗಿದ್ದಾರೆ ಎಂಬ ದೂರು ನೀಡಲು ಠಾಣೆಗೆ ಭೇಟಿಕೊಟ್ಟಿದ್ದರು ಎನ್ನಲಾಗ್ತಿದೆ.

ಅಥಣಿ ಪೊಲೀಸ್ ಠಾಣೆ ಸೀಲ್​​​ಡೌನ್

ತಾಲೂಕು ಆಡಳಿತ ಮೃತನ ಪ್ರಯಾಣದ ವಿವರ ಕಲೆ ಹಾಕುತ್ತಿರುವಾಗ, ಠಾಣೆಗೆ ಭೇಟಿ ಕೊಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಐವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಠಾಣೆಗೆ ಸ್ಯಾನಿಟೈಸ್​​​ ಮಾಡಲಾಗುವುದು ಎಂದು ಸಿಪಿಐ ಶಂಕರಗೌಡ ಬಸವನಗೌಡ ಅವರು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details