ಕರ್ನಾಟಕ

karnataka

ETV Bharat / state

ಒಂದೇ ಕುಟುಂಬದ 19 ಜನರಿಗೆ ಕೋವಿಡ್ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಭಾವನಸೌಂದತ್ತಿ ಗ್ರಾಮದವರು ಹೆಚ್ಚಾಗಿ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದ್ದವರು. ಹೀಗಾಗಿ ನಿನ್ನೆ ಒಂದೇ ಕುಟುಂಬದ ಐವರಿಗೆ ಇವತ್ತು‌ 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

corona cases increased in belgavi
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

By

Published : Mar 14, 2021, 10:45 PM IST

ಬೆಳಗಾವಿ: ರಾಯಭಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದಲ್ಲಿ ಒಂದೇ ಕುಟುಂಬದ 19 ಜನರಿಗೆ ಕೋವಿಡ್ ಬಂದಿರುವ ಪರಿಣಾಮ, ಮುಂಜಾಗ್ರತಾ ‌ಕ್ರಮವಾಗಿ ಕಂಟೈನ್​ಮೆಂಟ್​​ ಝೋನ್​ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾವನಸೌಂದತ್ತಿ ಗ್ರಾಮದವರು ಹೆಚ್ಚಾಗಿ ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದ್ದವರು. ಹೀಗಾಗಿ ನಿನ್ನೆ ಒಂದೇ ಕುಟುಂಬದ ಐವರಿಗೆ ಇವತ್ತು‌ 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಖಚಿತವಾಗಿದೆ. ಹೀಗಾಗಿ ಮುಂಜಾಗ್ರತಾ ‌ಕ್ರಮವಾಗಿ ಆ ಗ್ರಾಮದಲ್ಲಿ 250 ಜನರಿಗೆ ಕೋವಿಡ್ ಸ್ಯಾಂಪಲ್​ ತೆಗೆದುಕೊಳ್ಳಲಾಗಿದ್ದು, ಕಂಟೋನ್ಮೆಂಟ್ ಝೋನ್​ ಮಾಡಲಾಗುತ್ತಿದೆ. ಇದರ ಜೊತೆಗೆ ಗಡಿ ಪ್ರದೇಶದಲ್ಲಿ ಮತ್ತಷ್ಟು ಕಠಿಣ ಕ್ರಮಕೈಗೊಳ್ಳುವ ಮೂಲಕ ಎಲ್ಲ ರೀತಿಯಲ್ಲೂ ಅಗತ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.

ಓದಿ:ಕ್ರಿಶ್ಚಿಯನ್​ಗೆ ಮತಾಂತರಗೊಂಡಿದ್ದ ಕುಟುಂಬ ಮರಳಿ ಹಿಂದೂ ಧರ್ಮಕ್ಕೆ..

ಕೋವಿಡ್ ಪ್ರಮಾಣ ಪತ್ರ ತಂದವರಿಗೆ ಮಾತ್ರ‌ ಕರ್ನಾಟಕಕ್ಕೆ ಅವಕಾಶ ನೀಡಲಾಗುತ್ತಿದೆ. ಮತ್ತಷ್ಟು ಮುತುವರ್ಜಿ ವಹಿಸುವುದರ ಜೊತೆಗೆ ಕೋವಿಡ್ ಟೆಸ್ಟ್ ಗಳನ್ನು ಹೆಚ್ಚಳ ಮಾಡಲಾಗುವುದು. ಕೊರೊನಾ ಬಂದವರನ್ನು ಕ್ವಾರಂಟೈನ್​​ಗೆ ಒಳಪಡಿಸುತ್ತೇವೆ ಎಂದು ತಿಳಿಸಿದರು.

ABOUT THE AUTHOR

...view details