ಬೆಳಗಾವಿ: ಗೋವಾ ಹಾಗೂ ಆರ್ಮಿ ಕ್ಯಾಂಟಿನ್ನ ಮದ್ಯ ಸಂಗ್ರಹಿಸಿಟ್ಟು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಐಬಿ ತಂಡ ಬಂಧಿಸಿದೆ.
ಕುಮಾರಸ್ವಾಮಿ ಲೇಔಟ್ನ ರಾಜೇಶ್ ನಾಯಕ ಹಾಗೂ ಕಣಬರ್ಗಿಯ ಶಂಕರ ದೇಸನೂರ ಬಂಧಿತರು. ಬಂಧಿತರಿಂದ 13 ಲಕ್ಷ ಮೌಲ್ಯದ ವಿವಿಧ ಕಂಪನಿಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾಲಿ ಹಾಗೂ ಮಾಜಿ ಸೈನಿಕ ಕುಟುಂಬಗಳಿಗೆ ಮಿಲಿಟರಿ ಕ್ಯಾಂಟಿನ್ನಲ್ಲಿ ಮದ್ಯವನ್ನು ಮತ್ತು ಕಡಿಮೆ ಹಣಕ್ಕೆ ಗೋವಾದಿಂದ ಅಕ್ರಮವಾಗಿ ಮದ್ಯ ಖರೀದಿಸಿ ತಂದು ವಿಜಯನಗರದ ರಕ್ಷಕ ಕಾಲೋನಿಯ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು.
ಓದಿ:ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ: ಸರ್ಕಾರದ ಕಟ್ಟುನಿಟ್ಟಿನ ಆದೇಶ
ಖಚಿತ ಮಾಹಿತಿ ಮೇರೆಗೆ ಸಿಸಿಐಬಿ ಸಿಪಿಐ ಸಂಜೀವ ಕಾಂಬಳೆ ನೇತೃತ್ವದ ತಂಡ ದಾಳಿ ನಡೆಸಿ ಗೋವಾದ 547 ಬಾಟಲ್ ಹಾಗೂ ಮಿಲಿಟರಿ ಕ್ಯಾಂಟಿನ್ನಲ್ಲಿ ಸಿಗುವ 203 ಮದ್ಯದ ಬಾಟಲ್ಗಳನ್ನು ವಶಕ್ಕೆ ಪಡೆದಿದೆ. ಇವು ರಾಜ್ಯದ ಮಾರುಕಟ್ಟೆಯಲ್ಲಿ 13 ಲಕ್ಷ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.