ಕರ್ನಾಟಕ

karnataka

ETV Bharat / state

ಬೆಳಗಾವಿ: ನಾಳೆಯಿಂದ ಸಿನಿಮಾ ಥಿಯೇಟರ್​ ಆರಂಭಕ್ಕೆ ಸ್ವಚ್ಛತಾ ಕಾರ್ಯ

ಬೆಳಗಾವಿಯಲ್ಲಿ ಸಿನಿಪ್ರಿಯರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಚಿತ್ರಮಂದಿರಗಳು ನಾಳೆಯಿಂದ ಓಪನ್​ ಆಗ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

belgavi
ಬೆಳಗಾವಿ

By

Published : Oct 14, 2020, 10:17 PM IST

ಬೆಳಗಾವಿ:ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳಿನಿಂದ‌ ಬಂದ್ ಆಗಿದ್ದ ಚಿತ್ರಮಂದಿರಗಳು ನಾಳೆಯಿಂದ ಆರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

ಬೆಳಗಾವಿಯಲ್ಲಿ ನಾಳೆಯಿಂದ ಸಿನಿಮಾ ಥಿಯೇಟರ್‌ಗಳು ಓಪನ್‌
ಈ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮಾಲೀಕರು, ಕೆಲಸಗಾರರು, ನಿರ್ಮಾಪಕರು ಹಾಗು ನಿರ್ದೇಶಕರು ಸೇರಿದಂತೆ ಚಿತ್ರರಂಗದ ಮಂದಿಯಲ್ಲಿ ಸಂತಸ ಮನೆ ಮಾಡಿದೆ. ಆದ್ರೆ, ನಾಳೆಯಿಂದ ಯಾವುದೇ ಹೊಸ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಥಿಯೇಟರ್​ ಮಾಲೀಕರು ಯಾವ ಸಿನಿಮಾವನ್ನು ಪ್ರದರ್ಶನಕ್ಕಿಡಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದು, ಲಾಕ್​ಡೌನ್​ ಮುನ್ನ ಬಿಡುಗಡೆಯಾಗಿದ್ದ ಚಿತ್ರಗಳ ಮರುಬಿಡುಗಡೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ಚಿತ್ರಮಂದಿರವೊಂದರಲ್ಲಿ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ
ಎರಡು ಚಿತ್ರಮಂದಿರಗಳು ಮಾತ್ರ ಓಪನ್:
ಜಿಲ್ಲೆಯ ಪೋಸ್ಟ್ ಆಫೀಸ್ ಸರ್ಕಲ್ ಬಳಿಯಿರುವ ಐನಾಕ್ಸ್ ಹಾಗೂ ಕಿರ್ಲೋಸ್ಕರ್ ನಗರದ ಬಳಿಯ ನ್ಯೂಕ್ಲಿಯಸ್ ಮಾಲ್‌ನಲ್ಲಿ ನಾಳೆ ಮಧ್ಯಾಹ್ನದ ನಂತರ ಚಿತ್ರಗಳ ಪ್ರದರ್ಶನವಾಗಲಿದೆ ಎಂದು ಚಿತ್ರಮಂದಿರ ಮಾಲೀಕರು ತಿಳಿಸಿದ್ದಾರೆ. ಇನ್ನುಳಿದಂತೆ ಜಿಲ್ಲೆಯ ಬಹುತೇಕ ಚಿತ್ರಮಂದಿರಗಳು ಮುಂಬರುವ ದಿನಗಳಲ್ಲಿ ಆರಂಭವಾಗಲಿವೆ. ಕೊರೊನಾ ವೈರಸ್ ತಡೆಗೆ ಚಿತ್ರಮಂದಿರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಇದರ ಪರಿಣಾಮ, ಚಿತ್ರಮಂದಿರಗಳಿಗೆ ಆಗಮಿಸುವ ಪ್ರತಿಯೊಬ್ಬ ಪ್ರೇಕ್ಷಕನನ್ನು ಕಡ್ಡಾಯವಾಗಿ ದೈಹಿಕ ಉಷ್ಣಾಂಶ ಪರಿಶೀಲನೆ, ವೈಯುಕ್ತಿಕ ಅಂತರ ಕಾಪಾಡಿಕೊಳ್ಳುವುದು, ಚಿತ್ರಮಂದಿರದಲ್ಲಿ ಕುಳಿತುಕೊಳ್ಳುವಾಗ ಒಂದು ಸೀಟು ಬಿಟ್ಟು ಮತ್ತೊಂದು ಸೀಟಿನಲ್ಲಿ ಕೂರಲು ಅವಕಾಶ, ಒಳಬರಲು ಮತ್ತು ಹೊರಹೋಗಲು ಪ್ರತ್ಯೇಕ ದ್ವಾರ ಸೇರಿದಂತೆ ಅನೇಕ ಕ್ರಮಗಳನ್ನು ಚಿತ್ರಮಂದಿರಗಳಲ್ಲಿ ಕೈಗೊಂಡಿದ್ದಾರೆ.

ಫಾಗಿಂಗ್, ಸ್ಯಾನಿಟೈಸಿಂಗ್:
ರಾಜ್ಯ ಸರ್ಕಾರದ ಕೋವಿಡ್ -19 ಮಾರ್ಗಸೂಚಿಗಳನ್ವಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಕೊರೊನಾ ವೈರಸ್ ತಡೆ ಮುಂಜಾಗ್ರತಾ ಕ್ರಮವಾಗಿ ಇವತ್ತಿನಿಂದಲೇ ಚಿತ್ರಮಂದಿರಗಳಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ ಜನರು ಕುಳಿತುಕೊಳ್ಳುವ ಆಡಿಟೋರಿಯಂ ಹಾಲ್​​ನಲ್ಲಿ ಫಾಗಿಂಗ್, ಸ್ಯಾನಿಟೈಸಿಂಗ್​ ಮಾಡಲಾಗುತ್ತಿದೆ. ಕೊರೊನಾ ತಡೆಗೆ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಿದೆ‌.

ABOUT THE AUTHOR

...view details