ಚಿಕ್ಕೋಡಿ :ನಗರದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ 116 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಯಾಗುವ ಮೂಲಕ ಗಡಿ ಭಾಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಉದ್ಯೋಗಾವಕಾಶ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ದೇಶದ ನಾನಾ ಕಂಪನಿಗಳ ತಜ್ಞರಿಂದ ಕಾರ್ಯಾಗಾರ ಹಾಗೂ ತರಬೇತಿಯನ್ನು ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳ ಸಂವಹನ ಮತ್ತು ಸಂದರ್ಶನ ಕಲೆಗಳನ್ನು ಕರಗತಗೊಳಿಸಲು ಲ್ಯಾಂಗ್ವೇಜ್ ಲ್ಯಾಬ್ ಹಾಗೂ ಆಕ್ಟಿವಿಟಿ ರೂಂ ಸ್ಥಾಪಿಸಲಾಗಿದೆ.
ಕೆಎಲ್ಇ ಕಾಲೇಜಿನ 116 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಬೆಂಗಳೂರಿನ ರ್ಯಾರೋ ಫೋಕಸ್ ಅಕಾಡೆಮಿ, ಡೇರ್ ಟೂ ಡ್ರೀಮ್, ಓರಾಕಲ್ ಯುನಿವರ್ಸಿಟಿ, ಓಲೀಮ ಬೋರ್ಡ್ ತರಬೇತಿ ಸಂಸ್ಥೆಗಳು ಹಾಗೂ ಹಲವಾರು ತಜ್ಞರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ತರಬೇತಿಯನ್ನು ನೀಡುತ್ತಿದ್ದಾರೆ. ಇದರ ಫಲವಾಗಿ 2018-19 ನೇ ಶೆಕ್ಷಣಿಕ ವರ್ಷದಲ್ಲಿ 116 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ತಿಳಿಸಿದ್ದಾರೆ.
ಗಡಿ ಭಾಗದ ಚಿಕ್ಕೋಡಿಯಲ್ಲಿ ಭಾಷೆ ತೊಂದರೆಯ ಜೊತೆಗೆ ಇಲ್ಲಿನ 116 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗುವ ಮೂಲಕ ತಾವು ಕೂಡ ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.