ಕರ್ನಾಟಕ

karnataka

ETV Bharat / state

ಒಂದು ಮತ, ಎರಡು ಸರ್ಕಾರ; ಅಂಕಲಗಿಯಲ್ಲಿ ರಮೇಶ್​ ಜಾರಕಿಹೊಳಿ ಪರ ಘೋಷಣೆ - ಮೋದಿ

ಕಾಂಗ್ರೆಸ್ಸಿಗೆ ರಾಜೀನಾಮೆ ನೀಡುವುದಾಗಿ ರಮೇಶ್​ ಜಾರಕಿಹೊಳಿ ಹೇಳಿಕೆ-ಬೆಂಬಲಿಗರಿಂದ ಅಂಕಲಗಿ ಗ್ರಾಮದಲ್ಲಿ ಘೋಷಣೆ- ಒಂದು ಮತ, ಎರಡು ಸರ್ಕಾರ. ವೋಟ್ ಫಾರ್ ಮೋದಿ, ಜೈ ರಮೇಶ್​​ ಜಾರಕಿಹೊಳಿ ಎಂದು ಸಂಭ್ರಮಾಚರಣೆ

ರಮೇಶ ಜಾರಕಿಹೊಳಿ

By

Published : Apr 23, 2019, 3:43 PM IST

ಬೆಳಗಾವಿ:ಕಾಂಗ್ರೆಸ್ಸಿಗೆ ರಾಜೀನಾಮೆ ನೀಡುವುದಾಗಿ ರಮೇಶ್​ ಜಾರಕಿಹೊಳಿ ಹೇಳಿಕೆ ನೀಡುತ್ತಿದ್ದಂತೆ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ರಮೇಶ್​ ಜಾರಕಿಹೊಳಿ‌ ಪರ ಬೆಂಬಲಿಗರು ಘೋಷಣೆ ಕೂಗಿದರು.

ಅಂಕಲಗಿಯಲ್ಲಿ ರಮೇಶ್​ ಜಾರಕಿಹೊಳಿ ಪರ ಘೋಷಣೆ

ಮಧ್ಯಾಹ್ನ ಸಚಿವ ಸತೀಶ ಜಾರಕಿಹೊಳಿ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದಿಂದ ಸತೀಶ್​ ಜಾರಕಿಹೊಳಿ ಅವರ ವಾಹನ ಹೊರಡುತ್ತಿದ್ದಂತೆ ರಮೇಶ್​ ಬೆಂಬಲಿಗರು ಮೋದಿ ಪರ ಘೋಷಣೆ ಕೂಗಿದರು. ಒಂದು ಮತ, ಎರಡು ಸರ್ಕಾರ. ವೋಟ್ ಫಾರ್ ಮೋದಿ. ಜೈ ರಮೇಶ್​ ಜಾರಕಿಹೊಳಿ ಎಂದು ಘೋಷಣೆ ಕೂಗಿದರು.

ಈ ವೇಳೆ ರಮೇಶ್​ ಜಾರಕಿಹೊಳಿ ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details