ಬೆಳಗಾವಿ: ಸಾಮಾನ್ಯವಾಗಿ ಎಮ್ಮೆಗಳು ಒಂದು ಕರುವಿಗೆ ಜನ್ಮ ನೀಡುವುದು ಕೇಳಿರುತ್ತೇವೆ. ಆದರೆ, ಇಲ್ಲೊಂದು ಎಮ್ಮೆ ಅವಳಿ ಕರುಗಳಿಗೆ ಜನ್ಮನೀಡಿ ಅಚ್ಚರಿ ಮೂಡಿಸಿದೆ.
ಇದು ಮಹಾತಾಯಿ, ಅವ್ವಂದಿರ ದಿನದ ಸಾರ್ಥಕತೆ.. ಅವಳಿ ಕರುಗಳಿಗೆ ಜನ್ಮನೀಡಿದ ಜೀವ.. - kannadanews
ಎಮ್ಮೆಯೊಂದು ಅವಳಿ ಕರುಗಳಿಗೆ ಜನ್ಮ ನೀಡಿದ್ದು, ಜನರಿಗೆ ಅಚ್ಚರಿಯ ಜತೆಗೆ ಕುತೂಹಲ.
ಅವಳಿ ಕರುಗಳಿಗೆ ಜನ್ಮನೀಡಿದ ಎಮ್ಮೆ
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಮಲ್ಲಿಕಾರ್ಜುನ ಸವನೂರ ಎಂಬುವರ ಎಮ್ಮೆ ಅವಳಿ ಕರುಗಳಿಗೆ ಜನ್ಮನೀಡಿದ್ದು, ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಎಮ್ಮೆ ಮತ್ತು ಕರುಗಳೆರಡೂ ಆರೋಗ್ಯವಾಗಿವೆ. ತಾಯಿಯಂದಿರ ದಿನವೇ ಸಾಕಿದ ಮಾಲೀಕ ಮಲ್ಲಿಕಾರ್ಜುನ ಅವರ ಕುಟುಂಬಕ್ಕೆ ಎಮ್ಮೆ ಒಳ್ಳೆ ಬಳುವಳಿಯನ್ನೇ ನೀಡಿದೆ. ಈ ಕುಟುಂಬಕ್ಕೀಗ ತಾಯಿಯಂದಿರ ದಿನದ ಸಾರ್ಥಕತೆ.