ಕರ್ನಾಟಕ

karnataka

ETV Bharat / state

ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡ್ತೇವೆ: ಯಡಿಯೂರಪ್ಪ - v somanna quits BJP

ವಿ ಸೋಮಣ್ಣ ಪಕ್ಷ ತೊರೆಯಲಿದ್ದಾರೆ ಎಂಬ ಮಾತಲ್ಲಿ ಯಾವುದೇ ಸತ್ಯಾಂಶ ಇಲ್ಲ- ಅದೆಲ್ಲಾ ಊಹಾಪೋಹ - ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ಬಿ ಎಸ್​ ಯಡಿಯೂರಪ್ಪ
ಬಿ ಎಸ್​ ಯಡಿಯೂರಪ್ಪ

By

Published : Mar 8, 2023, 2:03 PM IST

ಬಿ ಎಸ್​ ಯಡಿಯೂರಪ್ಪ ಹೇಳಿಕೆ

ಚಿಕ್ಕೋಡಿ(ಬೆಳಗಾವಿ): ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವಿಚಾರಕ್ಕೆ ಸದ್ಯಕ್ಕೆ ಯಾವುದೇ ಮಹತ್ವ ಇಲ್ಲಾ. ಈ ಸಂಬಂಧ ಪಕ್ಷದ ಹೈಕಮಾಂಡ್ ಕುಳಿತು ಚರ್ಚೆ ಮಾಡುತ್ತೆ, ಚುನಾವಣಾ ಸಮಿತಿಯಲ್ಲಿ ಚರ್ಚೆ ಆಗುತ್ತದೆ. ನಂತರವೇ ಅಂತಿಮವಾಗಿ ಯಾರಿಗೆ ಟಿಕೆಟ್ ಕೊಡಬೇಕು ಅಂತಾ ತೀರ್ಮಾನ ಮಾಡಲಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿ ಐದಾರು ಜನ ಶಾಸಕರಿಗೆ ಟಿಕೆಟ್ ಸಿಗಲ್ಲಾ ಅನ್ನೋ ವಾತಾವರಣ ಇದೆ ಅಂತಾ ಹೇಳಿದ್ದೆ. ಆದರೆ, ಅಂತಿಮವಾಗಿ ಏನೇ ತೀರ್ಮಾನ ಮಾಡೋದು ಹೈಕಮಾಂಡ್. ಆ ರೀತಿ ಆಗಬಹುದು ಅಂತಾ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆಯೇ ಹೊರತು, ಅದೇ ಕೊನೆ ಮಾತಲ್ಲಾ. ಎಲ್ಲರಿಗೂ ಸೀಟ್ ಸಿಕ್ರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು. ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆಗೆ,ನಾನು ಆ ರೀತಿ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

ಭಾರತೀಯ ಜನತಾ ಪಕ್ಷದಿಂದ ಕಾಂಗ್ರೆಸ್‌ಗೆ ಸಚಿವರು, ಶಾಸಕರು ಸೇರ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ,ನನ್ನ ಪ್ರಕಾರ ಆ ತರ ಯಾವುದಕ್ಕೂ ಅವಕಾಶ ಇಲ್ಲಾ, ಯಾರು ಪ್ರಯತ್ನ ಮಾಡುತ್ತಿಲ್ಲ. ವಸತಿ ಸಚಿವ ವಿ ಸೋಮಣ್ಣ ಪಕ್ಷ ಬಿಡ್ತಾರೆ ಅನ್ನೋದ್ರಲ್ಲಿ ಸತ್ಯಾಂಶ ಇಲ್ಲಾ. ಇಲ್ಲಿಂದ ಹೋದ ಮೇಲೆ ಸೋಮಣ್ಣ ಅವರನ್ನ ಕರೆದು ಮಾತಾಡ್ತೇನೆ. ಆ ತರ ಏನೂ ಭಿನ್ನಾಭಿಪ್ರಾಯ ಇಲ್ಲಾ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಬಿಎಸ್​ವೈ ಸ್ಪಷ್ಟಪಪಡಿಸಿದರು.

ವಿ.ಸೋಮಣ್ಣ ಡಿ ಕೆ ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ,ಡಿಕೆ ಶಿವಕುಮಾರ್ ಅವರು ಎಲ್ಲರನ್ನೂ ಕರೆದು ಮಾತನಾಡುವುದನ್ನು ನಿರಂತರವಾಗಿ ಮಾಡ್ತಿದ್ದಾರೆ. ಆ ತರ ಯಾವುದಕ್ಕೂ ನಮ್ಮ ಮುಖಂಡರು ಬೆಲೆ ಕೊಡ್ತಿಲ್ಲ. ಯಾರು ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಪಕ್ಷ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್​ನವರಿಗೆ ಸೋಲಿನ‌ ಭೀತಿ ಕಾಡುತ್ತಿದೆ. ಕಾಂಗ್ರೆಸ್ ನಿಂದ ಬರುವವರಿಗೆ ಸ್ವಾಗತ, ಹಾಗೆಯೇ ಬಿಜೆಪಿಯಿಂದ ಹೋಗುವವರನ್ನು ಗೌರವಯುತವಾಗಿ ಕಳುಹಿಸಿಕೊಡ್ತೇವೆ ಎಂದು ಮಾಜಿ ಸಿಎಂ ಹೇಳಿದರು.

17 ಜನರಲ್ಲೂ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಅಧಿಕಾರಕ್ಕೆ ಬರುವ ಪಕ್ಷ ಬಿಟ್ಟು ಯಾಕೆ ಹೋಗ್ತಾರೆ? ಅವತ್ತಿನಿಂದ ಇವತ್ತಿನ ವರೆಗೂ ಪಕ್ಷ ಕಟ್ಟಲು ಬೆನ್ನೆಲುಬಾಗಿ ಸಹಕಾರ ನೀಡಿದ್ದಾರೆ. ಆ ತರ ಯಾರೊಬ್ಬರೂ ಸಹ ಪಕ್ಷ ಬಿಟ್ಟು ಹೋಗಲ್ಲ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದರು.

ಸೋಲಿನ ಭೀತಿಯಿಂದ ರಾಜ್ಯಕ್ಕೆ ಪದೇ ಪದೇ ಮೋದಿ, ಅಮಿತ್ ಶಾ ಬರ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ಸಿದ್ದರಾಮಯ್ಯನವರು ಹಾಗೇ ಹೇಳಲು ತೊಂದರೆ ಇಲ್ಲಾ‌. ಅವರು ಬರ್ತಾಯಿರೋದ್ರಿಂದ ಕಾಂಗ್ರೆಸ್‌ಗೆ ಸೋಲಿನ ಭೀತಿ ಜಾಸ್ತಿ ಆಗಿದೆ ಅನ್ನೋದು ನಿಜ. ಅದನ್ನ ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಸಂತೋಷ ಪಡುತ್ತೇನೆ, ಕರ್ನಾಟಕಕ್ಕೆ ನಿರಂತರವಾಗಿ ಅವರು ಹೆಚ್ಚು ಒತ್ತು ಕೊಡ್ತಿದ್ದಾರೆ. ಅದಕ್ಕೆ ಬರ್ತಿದ್ದಾರೆ ಎಂದರು.

ಇದನ್ನೂ ಓದಿ:ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಸರ್ಕಾರದ ಹೈಡ್ರಾಮಾ: ಹೆಚ್.ವಿಶ್ವನಾಥ್

ABOUT THE AUTHOR

...view details