ಕರ್ನಾಟಕ

karnataka

ETV Bharat / state

ಕೋಲಾರ-ಕಲಬುರಗಿಯಲ್ಲಿ ಬಿಜೆಪಿ ಗೆಲುವು ಶತಸಿದ್ಧ: ಬಿಎಸ್‍ವೈ ವಿಶ್ವಾಸ - ಮೋದಿ

ಬೈಲಹೊಂಗಲದಲ್ಲಿ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ 22 ಸ್ಥಾನ ಬಿಜೆಪಿ ಗೆಲ್ಲಲಿದೆ. ಅದರಂತೆ ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲಬುರಗಿಯಲ್ಲಿ ಖರ್ಗೆ ಸೋಲಲಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ

By

Published : Apr 13, 2019, 5:00 PM IST

ಬೆಳಗಾವಿ:ಈ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ. ಬೇಕಾದ್ರೆ ಬರೆದು ಕೊಡ್ತಿನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 22 ಸ್ಥಾನ ಬಿಜೆಪಿ ಗೆಲ್ಲಲಿದೆ. ಅದರಂತೆ ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲಬುರಗಿಯಲ್ಲಿ ಖರ್ಗೆ ಸೋಲಲಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ

ದೇಶದ ಕಳ್ಳರ ಕೊನೆಯಲ್ಲಿ ಮೋದಿ ಎಂಬ ಹೆಸರಿದೆ ಎಂಬ ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಗೆ ಮನುಷ್ಯತ್ವ ಇಲ್ಲ. ಆತ ಏನು ಮಾತನಾಡುತ್ತಾನೆ ಆತನಿಗೇ ಗೊತ್ತಿಲ್ಲ. ಮೋದಿ ವಿರುದ್ಧ ಮಾತನಾಡಿದ್ರೆ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತೆ ಎಂಬ ಭ್ರಮೆಯಲ್ಲಿ ರಾಹುಲ್ ಗಾಂಧಿ ಇದ್ದಾರೆ. ದೇಶದಲ್ಲಿ ಪಕ್ಷ ಕಟ್ಟುವ ಕೆಲಸ ಬಿಟ್ಟು ಮೋದಿ ವಿರುದ್ಧ ಟೀಕೆಗೆ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಹುಲ್ ವಿರುದ್ಧ ಬಿಎಸ್‍ವೈ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ABOUT THE AUTHOR

...view details