ಬೆಳಗಾವಿ: ದೇಶಾದ್ಯಂತ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸುವರ್ಣಸೌಧದ ಕಟ್ಟಡ ತ್ರಿವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ನೋಡುಗರ ಗಮನ ಸೆಳೆಯುತ್ತಿದೆ.
ಸ್ವಾತಂತ್ರ್ಯ ಗಳಿಸಿ 75ನೇ ವರ್ಷದ ಸವಿನೆನಪಿಗಾಗಿ ದೇಶದಾದ್ಯಂತ ಮಾರ್ಚ್ 12ರಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಡಳಿತದಿಂದ ಬೆಳಗಾವಿ ಸುವರ್ಣ ಸೌಧದ ಕಟ್ಟಡಕ್ಕೆ ತ್ರಿವರ್ಣ ಬಣ್ಣಗಳ ಲೈಟಿಂಗ್ ಮಾಡಿದ್ದು, ಕಟ್ಟಡ ಝಗಮಗಿಸುತ್ತದೆ.
ಸುವರ್ಣಸೌಧದ ಇಡೀ ಕಟ್ಟಡಕ್ಕೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಲೈಟಿಂಗ್ಸ್ನಿಂದ ಅಲಂಕಾರ ಮಾಡಲಾಗಿದ್ದು, ಸುತ್ತಮುತ್ತಲಿನ ನೂರಾರು ಜನರು ಸುವರ್ಣ ನೋಡಲು ಆಗಮಿಸುತ್ತಿದ್ದಾರೆ.
ಭಾನುವಾರ ಸಂಜೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸುವರ್ಣಸೌಧ ನೋಡಲು ಕುಟುಂಬ ಸಮೇತ ಆಗಮಿಸಿದ್ದು ವಿಶೇಷವಾಗಿತ್ತು. ಇನ್ನು ಕೊರೊನಾ ಕಾರಣಕ್ಕೆ ಸುವರ್ಣಸೌಧದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.