ಬೆಳಗಾವಿ: ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದಲ್ಲಿನ 300ಕ್ಕೂ ಹೆಚ್ಚಿನ ಮನೆಗಳು ಜಲಾವೃತವಾದ ಪರಿಣಾಮ, 289ಕ್ಕೂ ಹೆಚ್ಚಿನ ಜನರು ಬೀದಿ ಪಾಲಾಗಿದ್ದಾರೆ. ಅವರಿಗೆ ಇದೀಗ ಅದೇ ಗ್ರಾಮದ ಹೊರವಲಯದಲ್ಲಿರುವ ಮೆಳವಂಕಿ ಕನ್ನಡ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ.
ಬೆಳಗಾವಿ: 300ಕ್ಕೂ ಹೆಚ್ಚು ಮನೆಗಳು ಜಲಾವೃತ ತಾಲೂಕಿನ ಹಳೇ ಮೆಳವಂಕಿ, ಅಡಿಬಟ್ಟಿ, ಚಿಗಡೊಳ್ಳಿ, ಹೊಸ ಮೆಳವಂಕಿ, ಕಲಾರಕೊಪ್ಪ, ಹಡಗಿನಹಾಳ, ಉದ್ದಗಟ್ಟಿ ಸೇರಿ 20ಕ್ಕೂಹೆಚ್ಚು ಗ್ರಾಮಗಳಲ್ಲಿ ನೂರಾರು ಮನೆಗಳು ಜಾಲವೃತವಾಗಿವೆ. ಇದರಿಂದಾಗಿ ಮೆಳವಂಕಿ ಸೇರಿ ಇತರ ಗ್ರಾಮದ ಸಾಕಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ.
ಕನ್ನಡ ಶಾಲೆಯಲ್ಲಿ ಸಂಸ್ಥರಿಗೆ ಆಶ್ರಯ ಕಳೆದ ವರ್ಷದ ಪ್ರವಾಹಕ್ಕೆ ನಲುಗಿ ಮನೆಗಳನ್ನು ಕಳೆದುಕೊಂಡ ಗ್ರಾಮಸ್ಥರಿಗೆ ಈವರೆಗೂ ನೆರೆ ಪರಿಹಾರ ಬಂದಿಲ್ಲ. ಇದೀಗ ಮತ್ತೇ ಮನೆಗಳು ನೀರಿನಲ್ಲಿ ಜಲಾವೃತವಾಗಿದ್ದರಿಂದ ಜನರು ಕಂಗಾಲಾಗಿದ್ದಾರೆ. ಇನ್ನು ಈ ಗ್ರಾಮದಲ್ಲಿ ಪ್ರತಿವರ್ಷ ಕೂಡ ಇದೇ ಸಮಸ್ಯೆ ಮುಂದುವರೆದರೂ ಅಧಿಕಾರಿಗಳು ಮಾತ್ರ ಇವರತ್ತ ತಿರುಗಿಯು ನೋಡಿಲ್ಲ ಎಂಬ ಆರೋಪವನ್ನು ಸಂತ್ರಸ್ಥರು ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ಬಿದ್ದ ಮನೆಗಳಿಗೂ ಇದುವರೆಗೂ ನೆರೆ ಪರಿಹಾರ ಬಂದಿಲ್ಲ. ಹೀಗಾಗಿ ಹೊಲದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವು.
ಕನ್ನಡ ಶಾಲೆಯಲ್ಲಿ ಸಂಸ್ಥರಿಗೆ ಆಶ್ರಯ ಆದ್ರೆ, ಅಪಾರ ಮಳೆಯಿಂದಾಗಿ ಅಲ್ಲಿಯೂ ನೀರು ಬಂದಿದೆ. ಬೆಳೆದ ಬೆಳೆಯಲ್ಲ ನೀರಿನಲ್ಲಿ ಜಲಾವೃತವಾಗಿದೆ. ನಮ್ಮ ಸಂಕಷ್ಟಕ್ಕೆ ಯಾರು ಸ್ಪಂಧಿಸುತ್ತಿಲ್ಲ. ಹೀಗಾದ್ರೆ ನಮ್ಮ ಕಷ್ಟವನ್ನು ಯಾರಿಗೆ ಹೇಳೋಣ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ 300ಕ್ಕೂ ಹೆಚ್ಚಿನ ಮನೆಗಳು ಮಳೆಗೆ ನೆಲಸಮವಾಗಿದ್ದವು. ಆದ್ರೆ, ಅದರಲ್ಲಿ ಕೇವಲ 100ಕ್ಕೂ ಕಡಿಮೆ ಜನರಿಗೆ ನೆರೆ ಪರಿಹಾರ ಬಂದಿದೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಏನೇ ಆಗಲಿ ಸರ್ಕಾರ ಶಾಶ್ವತ ನೆಲೆ ಕಲ್ಪಿಸಬೇಕು ಎಂಬುವುದು ಎಲ್ಲರ ಒತ್ತಾಸೆಯಾಗಿದೆ.