ಬೆಳಗಾವಿ:ಮಹಾರಾಷ್ಟ್ರದಿಂದ ಮರಳಿ ಬಂದು ಕ್ವಾರಂಟೈನಲ್ಲಿರಿಸಲಾಗಿದ್ದ 600 ಮಂದಿಯನ್ನು ವರದಿ ಬರುವ ಮುನ್ನವೇ ಬೆಳಗಾವಿ ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಮತ್ತೆ ಎಡವಿದ ಬೆಳಗಾವಿ ಜಿಲ್ಲಾಡಳಿತ: ವರದಿ ಬರುವ ಮುನ್ನ 600 ಕ್ವಾರಂಟೈನಿಗಳ ಬಿಡುಗಡೆ ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಬಂದಿದ್ದ 600ಕ್ಕೂ ಅಧಿಕ ಜನರನ್ನು ಜಿಲ್ಲೆಯ ಸರ್ಕಾರಿ ಹಾಸ್ಟೆಲ್ ಮತ್ತು ಲಾಡ್ಜ್ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹಾಗೇ, ಅವರೆಲ್ಲರ ಗಂಟಲು ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಶಂಕಿತರನ್ನು ಜಿಲ್ಲಾಡಳಿತ ಬಿಟ್ಟು ಕಳುಹಿಸಿದೆ.
ಸರ್ಕಾರದ ಆದೇಶ ಬಂದ ಹಿನ್ನಲೆಯಲ್ಲಿ ಹಿಂದೆ-ಮುಂದೆ ನೋಡದೆ ಅಧಿಕಾರಿಗಳು ಎಲ್ಲರನ್ನು ಕ್ವಾರಂಟೈನ್ ಕೇಂದ್ರದಿಂದ ಕಳಿಸಿದ್ದಾರೆ. ಸರ್ಕಾರದ ಈ ನಡೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಕೂಡ ಅಥಣಿಯಲ್ಲಿ ಕೊರೊನಾ ವರದಿ ಬರುವ ಮುನ್ನವೇ ಶಂಕಿತರನ್ನು ಬಿಟ್ಟು ಕಳುಹಿಸಲಾಗಿತ್ತು. ಬಳಿಕ ಅದರಲ್ಲಿರುವ 13 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಹಿಂದೆ ಯಡವಟ್ಟು ಮಾಡಿಕೊಂಡಿದ್ದರೂ ಬೆಳಗಾವಿ ಜಿಲ್ಲಾಡಳಿತ ಬುದ್ದಿ ಕಲಿಯದೆ ಮತ್ತೇ ಅದೇ ಸನ್ನಿವೇಶ ಮರುಕಳಿಸುವಂತೆ ಮಾಡಿದೆ.